ಪಶ್ಚಿಮ ಬಂಗಾಳದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭಾರೀ ಅಗ್ನಿ ದುರಂತ; ನರ್ಸ್ ಒಬ್ಬರು ಬಲಿ
Update: 2016-08-27 14:35 IST
ಕೋಲ್ಕತಾ, ಆ.27: ಪಶ್ಚಿಮಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿನ ಬೆಹ್ರಾಂಪುರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ನರ್ಸ್ ಒಬ್ಬರು ಅಗ್ನಿ ದುರಂತಕ್ಕೆ ಬಲಿಯಾಗಿದ್ದಾರೆ. ಹಲವು ಮಂದಿ ಆಸ್ಪತ್ರೆಯೊಳಗೆ ಸಿಲುಕಿ ಹಾಕಿಕೊಂಡಿರುವ ಘಟನೆ ವರದಿಯಾಗಿದೆ.
ಆಸ್ಪತ್ರೆಯ 3ನೇ ಮಹಡಿಯಲ್ಲಿರುವ ಮಕ್ಕಳ ವಾರ್ಡ್ ಬಳಿಕದ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಕ್ಕಳ ವಾರ್ಡ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನರ್ಸ್ ಒಬ್ಬರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.