×
Ad

ಗುಜರಾತ್‌ ನ ಕರಾವಳಿಯಲ್ಲಿ ಭೂಕಂಪ

Update: 2016-08-27 16:41 IST

ಅಹ್ಮದಾಬಾದ್, ಆ.27 : ಗುಜರಾತ್ ನ ಜುನಾಗಢ ಜಿಲ್ಲೆಯ ಮಂಗ್ರೋಲ್‌ ಕರಾವಳಿಪ್ರದೇಶದಲ್ಲಿ ಇಂದು ಅಪರಾಹ್ನ ಎರಡು ಬಾರಿ ಭೂಕಂಪ ಉಂಟಾಗಿದ್ದು, ರೆಕ್ಟರ್‌ ಮಾಪಕದಲ್ಲಿ 4.4  ತೀವ್ರತೆ ದಾಖಲಾಗಿದೆ.
ಇಂದು ಮೊದಲ ಬಾರಿ 12:23ರ ಹೊತ್ತಿಗೆ 2.5 ತೀವ್ರತೆಯ ಭೂಕಂಪ  ಉಂಟಾಯಿತು.50 ಕಿ.ಮೀ ವ್ಯಾಪ್ತಿಯಲ್ಲಿ ಭೂಕಂಪದ ಅನುಭವ ಆಗಿದೆ ಬಳಿಕ  ಮಧ್ಯಾಹ್ನ 12:30ರ  ಹೊತ್ತಿಗೆ  ಎರಡನೆ ಬಾರಿ  4.4 ತೀವ್ರತೆಯ   ಭೂಕಂಪನವಾಗಿದ್ದು,  ಆದರೆ ಸಾವುನೋವು ಅಥವಾ ನಷ್ಟದ ಬಗ್ಗೆ ವರದಿಯಾಗಿಲ್ಲ.

ಗುಜರಾತ್‌ನಲ್ಲಿ ಮೂರನೆ ಬಾರಿ ಭೂಕಂಪ ಉಂಟಾಗಿದೆ.  ಜುಲೈನಲ್ಲಿ ದಕ್ಷಿಣ ಗುಜರಾತ್‌ನ ಸೂರತ್‌ ನಲ್ಲಿ  ಮತ್ತು ಮಾರ್ಚ್‌ ನಲ್ಲಿ ಕಛ್ ನ ಭಚಾವ್ ನಲ್ಲಿ ಭೂಕಂಪ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News