ಯುಎಇ: 762 ಔಷಧಗಳ ಬೆಲೆ ಇಳಿಕೆ

Update: 2016-08-28 08:43 GMT

ದುಬೈ,ಆಗಸ್ಟ್ 28: ಯುಎಇಯಲ್ಲಿ 762 ಔಷಧಗಳಿಗೆ ಬೆಲೆ ಕಡಿಮೆಗೊಳಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ. 657 ಔಷಧಗಳ ಬೆಲೆ ಸೆಪ್ಟಂಬರ್ ಒಂದರಿಂದ ಮತ್ತು 105 ಔಷಧಗಳ ಬೆಲೆ ಮುಂದಿನ ವರ್ಷ ಜನವರಿಯಿಂದ ಕಡಿಮೆಗೊಳ್ಳಲಿದೆ ಎಂದು ವರದಿಯಾಗಿದೆ. ಶೇ.2ರಿಂದ ಶೇ.63ರಷ್ಟು ಬೆಲೆ ಇಳಿಕೆ ಮಾಡಲಾಗುವುದು ಎಂದು ಔಷಧ ಬೆಲೆ ನಿರ್ಣಯ ಸಮಿತಿ ಉಪಾಧ್ಯಕ್ಷ ಮತ್ತು ಆರೋಗ್ಯ ಸಚಿವಾಲಯದಸಹಅಧೀನ ಕಾರ್ಯದರ್ಶಿಡಾ. ಅಮೀನ್ ಹುಸೈನ್ ಅಲ್ ಆಮಿರ್ ತಿಳಿಸಿದ್ದಾರೆ.39 ಅಂತಾರಾಷ್ಟ್ರೀಯ ಕಂಪೆನಿಗಳು ತಯಾರಿಸುವ ಔಷಧಗಳ ಬೆಲೆ ಕಡಿಮೆಗೊಳ್ಳಲಿದೆ. ಔಷಧಗಳ ಬೆಲೆಯನ್ನು ಹಂತಹಂತವಾಗಿ ಕಡಿಮೆಗೊಳಿಸುವ ಪ್ರಕ್ರಿಯೆಯನ್ನು ಆರೋಗ್ಯ ಸಚಿವಾಲಯ 2011ರಿಂದ ಆರಂಭಿಸಿತ್ತು. ಇದರ ಅಂಗವಾಗಿ ಇದು ಏಳನೆ ಬಾರಿಗೆ ಔಷಧಬೆಲೆ ಇಳಿಕೆ ಆಗಲಿದೆ ಎಂದು ವರದಿ ತಿಳಿಸಿದೆ.

 ಕಳೆದ ಐದು ವರ್ಷಗಳಲ್ಲಿ 8725ಔಷಧಗಳ ಬೆಲೆ ಕಡಿಮೆ ಮಾಡಲು ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. 675 ಔಷಧಗಳ ಬೆಲೆಕಡಿಮೆ ಮಾಡುವಾಗ ರೋಗಿಗಳಿಗೆ 267 ದಶಲಕ್ಷ ದಿರ್‌ಹಮ್ ಲಾಭಆಗಲಿದೆ. ಗುಣವಾಗದ ರೋಗಗಳಿಂದ ಬಳಲುತ್ತಿರುವ ಬಡರೋಗಿಗಳಿಗೆ ಇದರಿಂದ ತುಂಬ ಪ್ರಯೋಜನ ಆಗಲಿದೆ. ಹೃದ್ರೋಗಕ್ಕೆ ಸಂಬಂಧಿಸಿದ 135 ಔಷಧಗಳು, ಕೇಂದ್ರ ನಾಡಿಗಳಿಗೆ ಸಂಬಂಧಿಸಿದ 115 ಔಷಧಗಳು ಶ್ವಾಸಕೋಶ ಸಮಸ್ಯೆಗೆ ಸಂಬಂಧಿಸಿದ 72 ಔಷಧಗಳು,ವೈರಸ್‌ಪೀಡಿತ ರೋಗಕ್ಕೆ ಸಂಬಂಧಿಸಿದ 84 ಔಷಧಗಳ ಬೆಲೆ ಕಡಿಮೆಯಾಗಲಿದೆ.ಗ್ರಂಥಿರೋಗಗಳಿಗೆ ಸಂಬಂಧಿಸಿದ 59 ಔಷಧಗಳು, ಸ್ತ್ರೀರೋಗದ 53 ಔಷಧಗಳು,ಚರ್ಮರೋಗದ 35 ಔಷಧಗಳು, ಉದರರೋಗದ 32 ಔಷಧಗಳು ಬೆಲೆಇಳಿಕೆ ಪಟ್ಟಿಯಲ್ಲಿದೆ.

  ಇಷ್ಟೆಲ್ಲ ಔಷಧಗಳ ಬೆಲೆ ಕಡಿಮೆ ಮಾಡುವುದರೊಂದಿಗೆ ಶೇ.80ರಷ್ಟು ಔಷಧಗಳ ಬೆಲೆಮಟ್ಟ ಇತರ ಜಿಸಿಸಿ ರಾಷ್ಟ್ರಗಳಿಗೆ ಸಮಾನವಾಗಲಿದೆ. ಉಳಿದ ಶೇ.20ರಷ್ಟು ಔಷಧಗಳ ಬೆಲೆಕಡಿಮೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ.ಇದಕ್ಕಾಗಿ ಅಂತಾರಾಷ್ಟ್ರೀಯ ಔಷಧ ಕಂಪೆನಿಗಳಿಗೆ ಯುಎಇಯಲ್ಲಿ ಪ್ಲಾಂಟ್‌ಗಳನ್ನು ಆರಂಭಿಸಲು ಮತ್ತು ಹೂಡಿಕೆ ನಡೆಸಲು ಅವಕಾಶ ನೀಡಲಾಗುವುದು. ಜೊತೆಗೆ ದೇಶಿ ಕಂಪೆನಿಗಳನ್ನು ಕೂಡಾ ಪ್ರೋತ್ಸಾಹಿಸಲಾಗುವುದು. ಮುಂದಿನ ವರ್ಷದಿಂದ ಜೆನಟಿಕ್ ಔಷಧಗಳ ಬೆಲೆಯನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಡಾ. ಅಮೀನ್ ಹುಸೈನ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News