ವೇತನ ನೀಡಲು ಹಣವಿಲ್ಲದ ಅಸ್ಸಾಂನ ಪ್ರವಾಸೋದ್ಯಮ ಪ್ರಚಾರಕ್ಕೆ ಪ್ರಿಯಾಂಕಾ ಪಡೆದ ಹಣವೆಷ್ಟು ಗೊತ್ತೇ ?
ಗುವಾಹಟಿ, ಆ. 28 : ಇತ್ತೀಚೆಗೆ ಹಾಲಿವುಡ್ ಚಿತ್ರಗಳಲ್ಲಿ ನಟಿಸುವ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಅಸ್ಸಾಂನ ಪ್ರವಾಸೋದ್ಯಮ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಆದರೆ ಅವರು ಅಸ್ಸಾಂ ಮೇಲಿನ ಪ್ರೀತಿಯಿಂದ ಆ ರಾಜ್ಯದ ಪ್ರವಾಸೋದ್ಯಮ ಬೆಳೆಸಲು ಹೊರಟಿಲ್ಲ. 'ಆಸಂ ಅಸ್ಸಾಂ ( Awesome Assam) ' ಹೆಸರಿನ ಈ ಪ್ರಚಾರ ಅಭಿಯಾನದ ಹತ್ತು ದಿನಗಳ ಶೂಟಿಂಗ್ ಗೆ ಪ್ರಿಯಾಂಕಾ ಭರ್ಜರಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅಂದರೆ ದಿನಕ್ಕೆ ಒಂದೂವರೆ ಕೋಟಿ ಪಡೆದು ಅಸ್ಸಾಂ ನ ಗುಣಗಾನ ಮಾಡಲಿದ್ದಾರೆ ಪ್ರಿಯಾಂಕಾ.
ವಿಶೇಷವೆಂದರೆ, ಭಾರೀ ಪ್ರವಾಹದಿಂದ ಕಂಗಾಲಾದ ಅಸ್ಸಾಂ ನ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು ವೇತನ, ಪಿಂಚಣಿಯಂತಹ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲು ಸರಕಾರದ ಖಜಾನೆಯಲ್ಲಿ ಹಣವಿಲ್ಲ ಎಂದು ಅಸ್ಸಾಂ ರಾಜ್ಯಪಾಲರು ಎರಡು ತಿಂಗಳ ಹಿಂದೆ ಹೇಳಿದ್ದರು.
ಅಂತಹ ರಾಜ್ಯದಿಂದ ಕೋಟಿ ಕೋಟಿ ಹಣ ಪಡೆದು ಪ್ರಚಾರಕ್ಕೆ ಹೋಗಿರುವುದು ಹಲವರ ಅಸಮಾಧಾನ, ಟೀಕೆಗೆ ಗುರಿಯಾಗಿದೆ.