×
Ad

ಆಪ್‌ನಿಂದ ಸಂದೀಪ ಕುಮಾರ್ ಅಮಾನತು

Update: 2016-09-03 19:10 IST

ಹೊಸದಿಲ್ಲಿ,ಸೆ.3: ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಸೀಡಿ ಬಹಿರಂಗಗೊಂಡ ಬಳಿಕ ದಿಲ್ಲಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹುದ್ದೆಯಿಂದ ವಜಾಗೊಂಡಿರುವ ಸಂದೀಪ ಕುಮಾರ್ ಅವರನ್ನು ಆಪ್ ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.

ಪಕ್ಷವು ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಕುಮಾರ್ ಮಾಡಿರುವುದು ಸಂಪೂರ್ಣ ತಪ್ಪು ಕೆಲಸವಾಗಿದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅವರನ್ನು ಅಮಾನತುಗೊಳಿಸಲಾಗಿದೆ. ವಿಷಯವನ್ನು ಶಿಸ್ತು ಸಮಿತಿಗೆ ಒಪ್ಪಿಸಲಾಗಿದ್ದು, ಅದು ಕೈಗೊಳ್ಳುವ ನಿರ್ಧಾರಕ್ಕೆ ಪಕ್ಷವು ಬದ್ಧವಾಗಿರುತ್ತದೆ ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಸುದ್ದಿಗಾರರಿಗೆ ತಿಳಿಸಿದರು.

ಕುಮಾರ್ ಅವರನ್ನು ಸಮರ್ಥಿಸಿಕೊಂಡಿರುವ ಪಕ್ಷದ ನಾಯಕ ಅಶುತೋಷ್ ಅವರ ಟ್ವೀಟ್‌ಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಸೋದಿಯಾ, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ ಪಕ್ಷದ ನಿಲುವು ಸ್ಪಷ್ಟವಾಗಿದೆ. ಆಪ್‌ನಲ್ಲಿ ನಡತೆಯ ವಿರುದ್ಧ ಯಾವುದೇ ಆರೋಪ,ಭ್ರಷ್ಟಾಚಾರ ಮತ್ತು ಅಪರಾಧಗಳನ್ನು ಸಹಿಸಲಾಗುವುದಿಲ್ಲ. ನನ್ನ ಮೇಲೆ ಇಂತಹುದೇ ಆರೋಪಗಳಿದ್ದರೂ ಕುಮಾರ್ ವಿರುದ್ಧದ ಕ್ರಮವನ್ನೇ ನನ್ನ ವಿರುದ್ಧವೂ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News