×
Ad

ಕೆಪಿಎಲ್: ಮೈಸೂರು, ಹುಬ್ಬಳ್ಳಿ ಗೆಲುವಿನ ಶುಭಾರಂಭ

Update: 2016-09-17 20:23 IST

ಹುಬ್ಬಳ್ಳಿ, ಸೆ.17: ಐದನೆ ಆವೃತ್ತಿಯ ಕೆಪಿಎಲ್ ಟ್ವೆಂಟಿ-20 ಟೂರ್ನಿಯ ಮೊದಲ ದಿನ ನಡೆದ ಎರಡು ಪಂದ್ಯಗಳಲ್ಲಿ ಮೈಸೂರು ವಾರಿಯರ್ಸ್‌ ಮತ್ತು ಹುಬ್ಬಳ್ಳಿ ಟೈಗರ್ಸ್‌ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
 ರಾಜ್‌ನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡದ ಮೊದಲ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ವಿರುದ್ಧ ಹುಬಳ್ಳಿ ಟೈಗರ್ಸ್‌ ಗೆಲುವು ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ವಿರುದ್ಧ ಮೈಸೂರು ವಾರಿಯರ್ಸ್‌ ಗೆಲುವು ದಾಖಲಿಸಿತು.
ಮಂಗಳೂರು ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಗೆಲುವಿಗೆ 149 ರನ್‌ಗಳ ಸವಾಲನ್ನು ಪಡೆದ ಮೈಸೂರು ವಾರಿಯರ್ಸ್‌ ಇನ್ನೂ 17 ಎಸೆತಗಳು ಬಾಕಿ ಉಳಿದಿರುವಾಗಲೇ 3 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
ಮೈಸೂರು ತಂಡದ ಆರಂಭಿಕ ದಾಂಡಿಗರಾದ ರಾಜು ಭಟ್ಕಳ್ 48 ರನ್(29ಎ, 9ಬೌ,1ಸಿ), ಅರ್ಜುನ್ ಹೊಯ್ಸಳ 22 ರನ್(32ಎ, 2ಬೌ), ಕೃಷ್ಣಪ್ಪ ಗೌತಮ್ 36 ರನ್(20ಎ, 1ಬೌ,4ಸಿ), ಆರ್. ಜೋನಾಥನ್ ಔಟಾಗದೆ 21 ರನ್ ಮತ್ತು ಪ್ರತೀಕ್ಷ್ 13 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಮಂಗಳೂರು ಯುನೈಟೆಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿತ್ತು. ನಾಯಕ ಮತ್ತು ವಿಕೆಟ್ ಕೀಪರ್ ಸಿ.ಎಂ. ಗೌತಮ್ 64 ರನ್(55ಎ, 6ಬೌ,2ಸಿ) ಮತ್ತು ನಿದೇಶ್ ಎಂ 54 ರನ್(40ಎ, 1ಬೌ, 4ಸಿ) ಇವರನ್ನು ಹೊರತುಪಡಿಸಿದರೆ ತಂಡದ ಇತರ ಯಾರೂ ಎರಡಂಕೆಯ ಸ್ಕೋರ್ ದಾಖಲಿಸಲಿಲ್ಲ.
ಎಬಿ ಸಾಗರ್(27ಕ್ಕೆ 2), ವಿವಿ ಕುಮಾರ್ (31ಕ್ಕೆ 2), ರಾಜು ಭಟ್ಕಳ್(4ಕ್ಕೆ 1) ಮತ್ತು ಜೆ.ಸುಚಿತ್(24ಕ್ಕೆ1) ದಾಳಿಯ ಮುಂದೆ ರನ್ ಗಳಿಸಲು ಮಂಗಳೂರು ತಂಡದ ಆಟಗಾರರು ಪರದಾಡಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಮಂಗಳೂರು ಯುನೈಟೆಡ್ 20 ಓರ್‌ಗಳಲ್ಲಿ 148/7( ಗೌತಮ್ 64, ನಿದೆೀಶ್ 54; ಸಾಗರ್ 27ಕ್ಕೆ 2, ವೈಶಾಕ್ ವಿಜಯ್ ಕುಮಾರ್ 31ಕ್ಕೆ 2).
ಮೈಸೂರು ವಾರಿಯರ್ಸ್‌ 17.1 ಓವರ್‌ಗಳಲ್ಲಿ 149/3(ರಾಜು ಭಟ್ಕಳ್ 48, ಕೆ.ಗೌತಮ್ 36; ಭರತ್ ಎಂ.ಪಿ. 20ಕ್ಕೆ 1).
ಪಂದ್ಯಶ್ರೇಷ್ಠ: ರಾಜು ಭಟ್ಕಳ್.

 ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ಗೆ ಜಯ
ಹುಬ್ಬಳ್ಳಿ, ಸೆ.17: ಐದನೆ ಆವೃತ್ತಿಯ ಕೆಪಿಎಲ್ ಟ್ವೆಂಟ-20 ಟೂರ್ನಿಯ ಮೊದಲ ಪಂದ್ಯದಲ್ಲಿ ಇಂದು ಹುಬ್ಬಳ್ಳಿ ಟೈಗರ್ಸ್‌ ತಂಡ ತವರಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ರಾಜ್‌ನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 130 ರನ್‌ಗಳ ಸವಾಲನ್ನು ಪಡೆದಿದ್ದ ಹುಬ್ಬಳ್ಳಿ ತಂಡ ಇನ್ನೂ ಆರು ಎಸೆತಗಳನ್ನು ಬಾಕಿ ಉಳಿಸಿ 8 ವಿಕೆಟ್ ನಷ್ಟದಲ್ಲಿ 133 ರನ್ ಗಳಿಸಿತು.
ಹುಬ್ಬಳ್ಳಿ ತಂಡದ ಆರಂಭಿಕ ದಾಂಡಿಗ ಮುಹಮ್ಮದ್ ತಾಹ (23 )ಅಭಿಷೇಕ್ ರೆಡ್ಡಿ (13 ) ಕುನಾಲ್ ಕಪೂರ್ (35 ), ದಿಕ್ಷಾಂಶು ನೇಗಿ (16), ಭರತ್ (15) ಮತ್ತು ವಿನೂ ಪ್ರಸಾದ್(ಔಟಾಗದೆ 22ರನ್) ಗಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನಮ್ಮ ಶಿವಮೊಗ್ಗ ತಂಡ ವಿಕೆಟ್ ಕೀಪರ್ ಸಾದಿಕ್ ಕಿರ್ಮಾನಿ 69 ರನ್(63ಎ, 6ಬೌ,2ಸಿ), ನಿಕಿನ್ ಜೋಸ್  37 ರನ್(38ಎ, 4ಬೌ) ಮತ್ತು ಸ್ಟುವರ್ಟ್ ಬಿನ್ನಿ 11ರನ್ ನೆರವಿನಲ್ಲಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 129 ರನ್‌ಗಳಿಸಿತ್ತು.
 ಸಾದಿಕ್ ಕಿರ್ಮಾನಿ ಮತ್ತು ನಿಕಿನ್ ಮೊದಲ ವಿಕೆಟ್‌ಗೆ 13 ಓವರ್‌ಗಳಲ್ಲಿ 83 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ತಂಡದ ಬ್ಯಾಟಿಂಗ್ ಸೊರಗಿತು. ಸಾದಿಕ್ ಅವರು ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು. ಅಷ್ಟರ ತನಕ ಅವರು ತಂಡದ ಸ್ಕೋರ್‌ನ್ನು ಏರಿಸಲು ಶ್ರಮಿಸಿದರು.
ಎಸ್.ಅರವಿಂದ್ (16ಕ್ಕೆ 3), ಹೂವೆರ್ (25ಕ್ಕೆ 2) ಮತ್ತು ಡಿ.ನೇಗಿ(18ಕ್ಕೆ 1)ನಮ್ಮ ಶಿವಮೊಗ್ಗದ ದಾಂಡಿಗರ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು.

ಸಂಕ್ಷಿಪ್ತ ಸ್ಕೋರ್ ವಿವರ ನಮ್ಮ ಶಿವಮೊಗ್ಗ 20 ಓವರ್‌ಗಳಲ್ಲಿ 129/6( ಸಾದಿಕ್ ಕಿರ್ಮಾನಿ 69, ನಿಕಿನ್ 37; ಅರವಿಂದ್ 16ಕ್ಕೆ 3).
ಹುಬ್ಬಳ್ಳಿ ಟೈಗರ್ಸ್‌ 19 ಓವರ್‌ಗಳಲ್ಲಿ 133/8( ಕಪೂರ್ 35, ಮುಹಮ್ಮದ ತಾಹ 23; ಕಾಝಿ 23ಕ್ಕೆ 3)
ಪಂದ್ಯಶ್ರೇಷ್ಠ: ಎಸ್.ಅರವಿಂದ್.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News