×
Ad

ಓಣಂ ಹರಾಜಿನಲ್ಲಿ ಒಂದು ಕೋಳಿಗೆ 22,500 ರೂಪಾಯಿ ಬೆಲೆ!

Update: 2016-09-22 11:46 IST

ಕುತ್ತಾಟ್ಟುಕುಳಂ, ಸೆ.22: ಓಣಂ ಆಚರಣೆಯ ಮಧ್ಯೆ ಸ್ಪರ್ಧಾತ್ಮಕ ಏಲಂ ಕರೆದಾಗ ಒಂದು ಹುಂಜ ಕೋಳಿಯು 22,500 ರೂಪಾಯಿಗೆ ವಿಕ್ರಯಿಸಲ್ಪಟ್ಟಿದೆ. ಕಾಕ್ಕೂರು ಎವರ್‌ಶೈನ್ ಆರ್ಟ್ಸ್ ಆ್ಯಂಡ್ ಸ್ಪೋಟ್ಸ್ ಕ್ಲಬ್‌ನ ಓಣಂ ಆಚರಣೆಗೆ ಸಂಬಂಧಿಸಿ ನಡೆದ ಸ್ಪರ್ಧಾತ್ಮಕ ಏಲಂ ಕರೆದಾಗ ಒಂದು ಹುಂಜ ಈ ಭಾರೀ ಮೊತ್ತಕ್ಕೆ ಹರಾಜು ಆಗಿದೆ ಎಂದು ವರದಿತಿಳಿಸಿದೆ.

ಐವತ್ತುರೂಪಾಯಿಗೆ ಏಲಂ ಆರಂಭವಾಗಿತ್ತು. ನಂತರ ಒಂದೊಂದು ಹಂತದಲ್ಲಿ ಏಲಂ ಮೊತ್ತ ಹೆಚ್ಚುತ್ತಾ ಹೋಗಿಕೊನೆಗೂ ಕಾಕ್ಕೂರಿನ ಫರ್ನಿಚರ್ ಅಂಗಡಿಯ ಬಾಲಕೃಷ್ಣನ್‌ರ ಪುತ್ರ ವೀಡಿಯೊಗ್ರಾಫರ್ ಸನೂಪ್ ಬಾಲಕೃಷ್ಣನ್ 22,500ರೂ. ತೆತ್ತು ಹುಂಜಕೋಳಿಯನ್ನು ಏಲಂನಲ್ಲಿ ಖರೀದಿಸಿದ್ದಾರೆ.

ಓಣಂ ವೇಳೆ ಕ್ಲಬ್‌ಗಳಿಗೆ ಹಣಕಾಸು ಸಂಗ್ರಹಿಸಲು ಇಂತಹ ಏಲಂಗಳು ಸಾಮಾನ್ಯವಾಗಿ ನಡೆಯುತ್ತದೆಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News