×
Ad

ಭಾರತದೊಂದಿಗಿನ ವಿವಾದ ಮಾತುಕತೆಯಿಂದ ಬಗೆಹರಿಸಿಕೊಳ್ಳಿ ಶರೀಫ್‌ಗೆ ಬಾನ್ ಕಿ-ಮೂನ್ ಸಲಹೆ

Update: 2016-09-22 20:44 IST

ಹೊಸದಿಲ್ಲಿ, ಸೆ.22: ಕಾಶ್ಮೀರದ ಕುರಿತು ವಿಶ್ವಸಂಸ್ಥೆಗೆ ಪಾಕಿಸ್ತಾನವು ಮತ್ತೆ ಮತ್ತೆ ಮಾಡುತ್ತಿರುವ ಬೇಡಿಕೆಯನ್ನು ತಿರಸ್ಕರಿಸಿರುವ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ-ಮೂನ್, ಭಾರತ ಹಾಗೂ ಪಾಕಿಸ್ತಾನ ಕಾಶ್ಮೀರ ಸಹಿತ ಬಾಕಿಯುಳಿದಿರುವ ವಿವಾದಗಳನ್ನು ‘ಮಾತುಕತೆಯ’ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕೆಂದು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್‌ರಿಗೆ ಹೇಳಿದ್ದಾರೆ.
ಭಾರತದಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆಯೆಂದು ಆರೋಪಿಸಿದ ಕಡತವೊಂದನ್ನು ಶರೀಫ್ ಹಸ್ತಾಂತರಿಸಿದ ವೇಳೆ ಅವರು ಈ ಸಲಹೆ ನೀಡಿದ್ದಾರೆ.
 ಕಾಶ್ಮೀರ ಸಹಿತ ಬಾಕಿಯುಳಿದಿರುವ ವಿವಾದಗಳನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸುವ ಅಗತ್ಯವನ್ನು ಬಾನ್ ಕಿ-ಮೂನ್ ಭಾರತ ಹಾಗೂ ಪಾಕಿಸ್ತಾನಗಳಿಗೆ ಒತ್ತಿ ಹೇಳಿದ್ದಾರೆ. ಅದು ಉಭಯ ದೇಶಗಳು ಹಾಗೂ ಒಟ್ಟಾರೆಯಾಗಿ ವಲಯದ ಹಿತಾಸಕ್ತಿಯಿಂದ ಒಳ್ಳೆಯದೆಂದು ಅವರು ತಿಳಿಸಿದ್ದಾರೆಂದು ಶರೀಫ್‌ರೊಂದಿಗೆ ಬಾನ್ ಕಿ-ಮೂನ್‌ರ ಭೇಟಿಯ ವಿವರ ನೀಡಿದ ಅವರ ವಕ್ತಾರ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 71ನೆ ಗೋಷ್ಠಿಯ ಪಾರ್ಶ್ವದಲ್ಲಿ ನಿನ್ನೆ ಅವರಿಬ್ಬರ ಭೇಟಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News