×
Ad

ಮೋದಿ ವಿರುದ್ಧ ತಿರುಗಿಬಿದ್ದ ಇಂಟರ್ನೆಟ್ ಬೆಂಬಲಿಗರು

Update: 2016-09-22 21:21 IST

ಹೊಸದಿಲ್ಲಿ , ಸೆ. 22 : ಪ್ರಧಾನಿ ನರೇಂದ್ರ ಮೋದಿ ಅವರು ಬಲೆಗೆ ಬಿದ್ದು ಬಿಟ್ಟಿದ್ದಾರೆ. ಆದರೆ ವಿಪರ್ಯಾಸವೆಂದರೆ ಇದು ಅವರೇ  ಬಲೆಯನ್ನು ಹೆಣೆದವರು ! 
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಾಗು ಈಗ ಎರಡು ವರ್ಷಗಳಲ್ಲಿ ಮೋದಿ ಹಾಗು ಬಿಜೆಪಿಯ ಕಟ್ಟರ್ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ನಾಯಕನ ಪರ ಅತ್ಯಂತ ಪ್ರಖರ ಹಾಗು ಉಗ್ರ ಪ್ರಚಾರದಲ್ಲಿ ತೊಡಗಿದ್ದರು. ಮೋದಿ ಹಾಗು ಬಿಜೆಪಿ ಬಗ್ಗೆ ಯಾರಾದರೂ ಚಕಾರ ಎತ್ತಿದರೆ ಈ ಬಲಪಂಥೀಯ ಟ್ರೋಲ್ ಗಳು ಅವರ ಮೇಲೆ ಮುಗಿ ಬೀಳುತ್ತಿದ್ದರು. ಎಲ್ಲಿಯವರೆಗೆಂದರೆ , ಮೋದಿಯನ್ನು ಟೀಕಿಸಿದವರು  ಅವಹೇಳನ, ಕೊಲೆ, ಹಿಂಸೆಯ, ಅತ್ಯಾಚಾರದ ಬೆದರಿಕೆಗಳನ್ನೂ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. 
ಆದರೆ ನಿಧಾನವಾಗಿ ಪರಿಸ್ಥಿತಿ ಬದಲಾಗಿದೆ. ಮಾತ್ರವಲ್ಲ ಈಗ ಅದು ತದ್ವಿರುದ್ಧವಾಗಿರುವ ಸ್ಪಷ್ಟ ಲಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಎದ್ದು ಕಾಣುತ್ತಿವೆ. ತನ್ನ ಟೀಕಾಕಾರರ ವಿರುದ್ಧ ದಾಳಿಗಿಳಿಯುತ್ತಿದ್ದ ತನ್ನ ಉಗ್ರ ಬೆಂಬಲಿಗರಿಗೆ ಯಾವುದೇ ಕಡಿವಾಣ ಹಾಕದ ಮೋದಿ ಈಗ ಸ್ವತಃ ತೀವ್ರ ದಾಳಿ ಎದುರಿಸುತ್ತಿದ್ದಾರೆ. ಅದೂ ತಮ್ಮದೇ ಬೆಂಬಲಿಗರಿಂದ ! 
ಇದಕ್ಕೆ ಮುಖ್ಯ ಕಾರಣ  - ಕಾಶ್ಮೀರದ ಉರಿಯಲ್ಲಿ 18 ಸೈನಿಕರನ್ನು ಬಲಿತೆಗೆದುಕೊಂಡ ಆತ್ಮಹತ್ಯಾ ದಾಳಿ.  ಯುಪಿಎ ಸರಕಾರವನ್ನು ದೇಶದ ಭದ್ರತೆ ಕಾಪಾಡಲು ವಿಫಲವಾಗಿದೆ ಎಂದು ಟೀಕಿಸುತ್ತಲೇ ಅಧಿಕಾರಕ್ಕೆ  ಬಂದ ಮೋದಿ ಅಧಿಕಾರಾವಧಿಯಲ್ಲಿ ಪಠಾಣ್ ಕೋಟ್ ನಲ್ಲಿ ಬಳಿಕ ಈಗ ಉರಿಯಲ್ಲಿ ದೊಡ್ಡ ದಾಳಿ ನಡೆದಿದೆ . ಇದು ನಿಜಕ್ಕೂ ಈ ಸರಕಾರದ ಭದ್ರತಾ ಕಾರ್ಯವೈಖರಿಯ ಬಗ್ಗೆ ಅದರ ಬೆಂಬಲಿಗರಲ್ಲೇ ಸಂಶಯ ಮೂಡಿಸಿದೆ . ಅದಕ್ಕಾಗಿಯೇ #WakeUpModi ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. 
ಈ ಎಲ್ಲ ಟೀಕೆಗಳ ನಡುವೆಯೂ ಸದ್ಯ ಭಾರತದ ಅತ್ಯಂತ ಜನಪ್ರಿಯ ನಾಯಕನೆಂದು ಸಮೀಕ್ಷೆಯೊಂದು ಇತ್ತೀಚಿಗೆ ಹೇಳಿದೆ. 
ಮೋದಿ ಕಾರ್ಯವೈಖರಿ ವಿರುದ್ಧ ಪ್ರಕಟವಾದ ಅಭಿಪ್ರಾಯಗಳಲ್ಲಿ ಕೆಲವು ಇಲ್ಲಿವೆ : 

ಕೃಪೆ :  qz.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News