ಸಾನಿಯಾ-ಸ್ಟ್ರಿಕೋವಾ ಫೈನಲ್‌ಗೆ ಲಗ್ಗೆ
Update: 2016-09-23 23:51 IST
ಟೋಕಿಯೊ, ಸೆ.23: ಭಾರತದ ಸಾನಿಯಾ ಮಿರ್ಝಾ ಹಾಗೂ ಝೆಕ್‌ನ ಬಾರ್ಬೊರ ಸ್ಟ್ರಿಕೋವಾ ಜಪಾನ್ ಪಾನ್‌ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಡಬಲ್ಸ್‌ನ ಸೆಮಿ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕಿತ ಜೋಡಿ ಸಾನಿಯಾ-ಸ್ಟ್ರಿಕೋವಾ ಶ್ರೇಯಾಂಕರಹಿತ ಜೋಡಿ ಕೆನಡಾದ ಗಾಬ್ರಿಯೆಲಾ ಡಬ್ರೊಸ್ಕಿ ಹಾಗೂ ಸ್ಪೇನ್‌ನ ಮರಿಯಾ ಸ್ಯಾಂಚೆಝ್‌ರನ್ನು 4-6, 6-3, 10-5 ಸೆಟ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ತಲುಪಿದರು.
ಸಾನಿಯಾ ಹಾಗೂ ಸ್ಟ್ರಿಕೋವಾ ಡಬಲ್ಸ್ ವಿಭಾಗದಲ್ಲಿ ಒಟ್ಟಿಗೆ ಆಡುತ್ತಿರುವ ಮೂರನೆ ಟೂರ್ನಮೆಂಟ್ ಇದಾಗಿದೆ. ಕಳೆದ ತಿಂಗಳು ಸಾನಿಯಾ-ಸ್ಟ್ರಿಕೋವಾ ಜೋಡಿ ಸಿನ್ಸಿನಾಟಿ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಆದರೆ, ಈ ಜೋಡಿ ಅಮೆರಿಕನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಕಾರೊಲಿನ್ ಗಾರ್ಸಿಯಾ ಹಾಗೂ ಕ್ರಿಸ್ಟಿನಾ ಮ್ಲಾಡೆನೊವಿಕ್ ವಿರುದ್ಧ ನೇರ ಸೆಟ್‌ಗಳಿಂದ ಸೋತು ಹೊರ ನಡೆದಿತ್ತು.