ಹೂಳಲು ಹೊರಟಾಗ ಅತ್ತ ಹೆಣ್ಣು ಮಗು !

Update: 2016-09-25 13:13 GMT

ಢಾಕಾ, ಸೆ.25  : ವೈದ್ಯರು ಮೃತಪಟ್ಟಿದೆ ಎಂದು ಘೋಷಿಸಿ ಅಂತಿಮ ಸಂಸ್ಕಾರ ನಡೆಸುತ್ತಿರುವಾಗ ನವಜಾತ ಹೆಣ್ಣು ಶಿಶುವೊಂದು ಅಳುವ ಮೂಲಕ ಪ್ರಾಣ ಉಳಿದ ಘಟನೆ ಬಾಂಗ್ಲಾ ರಾಜಧಾನಿ ಢಾಕಾ ಸಮೀಪದ ಫರೀದ್ ಪುರದಿಂದ ವರದಿಯಾಗಿದೆ. 

ಜಿಲ್ಲಾ ಮಟ್ಟದ ಕ್ರಿಕೆಟಿಗ ನಜಮುಲ್ ಅಕ್ತರ್ ಹಾಗು ಅವರ ವಕೀಲೆ ಪತ್ನಿ ನಾಜ್ನೀನ್ ಅಕ್ತರ್ ಅವರಿಗೆ ಗುರುವಾರ ಹೆಣ್ಣು ಮಗು ಜನಿಸಿದೆ. ಮಗುವಿಗೆ ಗಾಲಿಬ ಹಯಾತ್ ಎಂದು ಹೆಸರಿಡಲಾಗಿತ್ತು. ಆದರೆ ಜನಿಸಿ ಎರಡು ಗಂಟೆಗಳಲ್ಲೇ ಅನಾರೋಗ್ಯಕ್ಕೊಳಗಾದ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು. 
ಅಂತಿಮ ಸಂಸ್ಕಾರಕ್ಕೆಂದು ಖಬರಸ್ಥಾನಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ  ಮರುದಿನ ಬರುವಂತೆ ಹೇಳಿದರು. ಮರುದಿನ ಬೆಳಗ್ಗಿನವರೆಗೆ  ಮಗುವಿನ ' ಮೃತದೇಹ' ಖಬರಸ್ಥಾನದಲ್ಲೇ ಇರುವ ' ಬಾಕ್ಸ್'ನಲ್ಲಿ ಇಡಲಾಗಿತ್ತು. ಹಾಗೆ ಸಿಬ್ಬಂದಿ ವಾಪಸ್ ಕಲಿಸಲು ಕಾರಣವೇನು ಹಾಗು ಮಗುವನ್ನು ಅಲ್ಲೇ ಬಿಟ್ಟು ಹೋಗಿದ್ದೇಕೆ ಎಂಬುದು ಸ್ಪಷ್ಟವಾಗಿಲ್ಲ. 

ಮರುದಿನ ಇನ್ನೇನು ಮಗುವನ್ನು ಸಮಾಧಿಗಿಳಿಸಬೇಕು ಎಂಬಷ್ಟರಲ್ಲಿ ಮಗು ಅಳಲು ಪ್ರಾರಂಭಿಸಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಢಾಕಾಗೆ ಹೋಗಬೇಕೆಂದು ವೈದ್ಯರು ಸೂಚಿಸಿದ್ದಾರೆ. ಢಾಕಾದಲ್ಲಿ ಚಿಕಿತ್ಸೆ ಮಾಡಿಸಲು ಹೆತ್ತವರಿಗೆ ಆರ್ಥಿಕ ಸಾಮರ್ಥ್ಯ ಇಲ್ಲದ ಕಾರಣ ದಾನಿಯೊಬ್ಬರು ಸಹಾಯಕ್ಕೆ ಮುಂದೆ ಬಂದಿದ್ದಾರೆ. 

ಮಗು 24 ತಿಂಗಳಲ್ಲೇ ಹುಟ್ಟಿ ಕೇವಲ 700 ತೂಕವಿರುವ ಮಗು ಗಂಭೀರ ಪರಿಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News