ಅವಳಿ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ
Update: 2016-09-26 15:35 IST
ಕುಟ್ಟಿಪ್ಪುರ, ಸೆ. 26: ಕುಟ್ಟಿಪುರದ ಕಝುತ್ತಲೂರಿನಲ್ಲಿ ಗೃಹಿಣಿಯೊಬ್ಬರು ತನ್ನ ಅವಳಿ ಮಕ್ಕಳನ್ನು ಕೊಂದು ನಂತರ ತಾನು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ.ಕುಟ್ಟಿಪುರ ಕಝುತ್ತಲ್ಲೂರಿನ ಪನತ್ತಿಲ್ ಫಝ್ಲುರ್ರಹ್ಮಾನ್‌ರ ಪತ್ನಿ ಜಸೀಲಾ(27) ಒಂದುವರ್ಷ ವಯಸ್ಸಿನ ತನ್ನ ಅವಳಿ ಮಕ್ಕಳ ಕೊರಳಿಗೆ ಹಗ್ಗ ಬಿಗಿದು ಕೊಂದ ಬಳಿಕ ಬೆಂಕಿಯಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆಯಾಗಿದ್ದಾರೆ. ಜಸೀಲಾರ ದೇಹವಿಡಿ ಸುಟ್ಟು ಕರಕಲಾಗಿದೆ. ಜಸೀಲಾರ ಮೃತದೇಹ ಕುಟ್ಟಿಪುರ ತಾಲೂಕು ಆಸ್ಪತ್ರೆಯಲ್ಲಿ ಮತ್ತು ಮಕ್ಕಳ ಮೃತದೇಹವನ್ನು ನಡಕ್ಕಾವಿನ ಆಸ್ಪತ್ರೆಯಲ್ಲಿರಿಸಲಾಗಿದೆ ಎಂದು ವರದಿ ತಿಳಿಸಿದೆ.