" ಮುಂಬೈ ಉಗ್ರ ಹೈ ಅಲರ್ಟ್, ಕಾರ್ಯಾಚರಣೆ ಜನರನ್ನು ದಾರಿ ತಪ್ಪಿಸುವ ಪ್ರಯತ್ನ"

Update: 2016-09-29 06:33 GMT

ಹೊಸದಿಲ್ಲಿ, ಸೆ. 29 : ಕಳೆದ ವಾರ ಮುಂಬೈ ನಲ್ಲಿ ಶಾಲಾ ಬಾಲಕಿಯೊಬ್ಬಳು ಉಗ್ರರನ್ನು ನೋಡಿದಳು ಎಂಬ ಮಾಹಿತಿಯ ಮೇಲೆ ಹೈ ಅಲರ್ಟ್ ಘೋಷಿಸಿ ರಕ್ಷಣಾ ಪಡೆಯ ವಿವಿಧ ವಿಭಾಗಗಳು ಭಾರೀ ಶೋಧ ಕಾರ್ಯ ಹಾಗು ಭದ್ರತಾ ವ್ಯವಸ್ಥೆ ನಡೆಸಿರುವ ಹಿಂದೆ ಜನರನ್ನು ದಾರಿತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಆರೋಪಿಸಿದ್ದಾರೆ. 
ಕಳೆದ ವಾರ ನವಿ ಮುಂಬೈನ ಉರಾನ್ ನೌಕಾನೆಲೆ ದಾಳಿ ನಡೆಸಲು ಉಗ್ರರು ಆಗಮಿಸಿದ್ದಾರೆ ಎಂಬ ವದಂತಿ ಇಡೀ ವಾಣಿಜ್ಯ ರಾಜಧಾನಿಯಲ್ಲಿ ತಲ್ಲಣ ಮೂಡಿಸಿತ್ತು. ಭಾರಿ ಪ್ರಮಾಣದದಲ್ಲಿ ನೌಕಾಪಡೆ, ಕರಾವಳಿ ಕಾವಲು ಪಡೆ, ಎನ್‌ಎಸ್‌ಜಿ, ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ಪಡೆ ಹೀಗೆ ಹಲವು ರಕ್ಷಣಾ ಏಜೆನ್ಸಿಗಳನ್ನು ಹೊಂದಿದ ಬೃಹತ್ ಶೋಧ ಕಾರ್ಯ ಮತ್ತು ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು. ಆದರೆ ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಏಕೆಂದರೆ ಕಪ್ಪು ಉಡುಗೆ ತೊಟ್ಟಿದ್ದ ಆಗಂತುಕರು ಶಾಲೆ ಹಾಗೂ ಓಎನ್‌ಜಿಸಿ ಎಂದು ಕೇಳುತ್ತಿದ್ದರು ಎಂಬುದಾಗಿ 12 ವರ್ಷದ ಶಾಲಾ ಬಾಲಕಿ ಕಲ್ಪಿಸಿಕೊಂಡು ( ಹುಸಿ ಬೆದರಿಕೆ) ಹೇಳಿದ್ದು ಎಂದು ವರದಿಯಾಗಿದೆ. 
" ಇಷ್ಟು ರಕ್ಷಣಾ ಸಂಸ್ಥೆಗಳು ಅಷ್ಟು ಬೇಗ್ ಕಾರ್ಯಚರಣೆಗಿಳಿಯಲು ಈ ಹುಸಿ ಬೆದರಿಕೆ ನೀಡಿದವರಿಗೆ ದಿಲ್ಲಿಯಲ್ಲಿರುವ ಯಾವುದೋ ಪ್ರಭಾವಿಗಳ ಬೆಂಬಲ ಇಲ್ಲದಿರಲು ಸಾಧ್ಯವಿಲ್ಲ " ಎಂದು ಸಂಜೀವ್ ಭಟ್ ಗುರುವಾರ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ. 


ಅವರ ಪೋಸ್ಟ್ ಇಲ್ಲಿದೆ : 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News