×
Ad

ಸಿಬಿಐ ಅಧಿಕಾರಿಗಳ ಜೊತೆ ಅಮಿತ್ ಷಾ ನಂಟಿನ ತನಿಖೆಯಾಗಲಿ : ಕೇಜ್ರಿವಾಲ್

Update: 2016-09-30 11:18 IST

ನವದೆಹಲಿ, ಸೆ.30: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಹಿರಿಯ ಅಧಿಕಾರಿ ಬಿ.ಕೆ.ಬನ್ಸಾಲ್ ತಮ್ಮ ಸುಸೈಡ್ ನೋಟ್ ನಲ್ಲಿ ಉಲ್ಲೀಖಿಸಿದ್ದ ಸಿಬಿಐ ಅಧಿಕಾರಿಗಳಿಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೂ ನಡುವೆ ಇರುವ ನಂಟಿನ ತನಿಖೆಯಾಗಬೇಕೆಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಿಳಿಸಿದ್ದಾರೆ.

‘‘ಬನ್ಸಾಲ್ ಅವರ ಸುಸೈಡ್ ನೋಟ್ ಓದಿದೆ. ನಿದ್ದೆ ಮಾಡಲಾಗಲಿಲ್ಲ. ಸಂಜೀವ್ ಗೌತಮ್ (ಸಿಬಿಐಡಿಐಜಿ) ಅವರನ್ನು ಕೂಡಲೇ ಬಂಧಿಸಬೇಕು, ಅಮಿತ್ ಷಾ ಹಾಗೂ ಅವರ ನಡುವಣ ನಂಟನ್ನು ತನಿಖೆ ನಡೆಸಬೇಕು’’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.
ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ಬನ್ಸಾಲ್ ತಮ್ಮ ಪುತ್ರನೊಂದಿಗೆ ಪೂರ್ವ ದೆಹಲಿಯ ನೀಲಕಂಠ ಅಪಾರ್ಟ್ ಮೆಂಟ್ಸ್ ನಲ್ಲಿರುವ ತಮ್ಮ ಮನೆಯಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮನ್ನಲ್ಲದೆ ಜುಲೈ 19ರಂದು ಆತ್ಮಹತ್ಯೆ ಮಾಡಿಕೊಂಡ ತಮ್ಮ ಪತ್ನಿ ಹಾಗೂ ಪುತ್ರಿಯನ್ನೂ ಸಿಬಿಐ ಅಧಿಕಾರಿಗಳು ಹಿಂಸಿಸಿದ್ದರು’’ ಎಂದು ಬನ್ಸಾಲ್ ತಮ್ಮ ಸುಸೈಡ್ ನೋಟ್ನಲ್ಲಿ ಹೇಳಿಕೊಂಡಿದ್ದರಲ್ಲದೆ ಸಿಬಿಐ ಡಿಐಜಿ ಸಂಜೀವ್ ಗೌತಮ್ ಅಲ್ಲದೆ, ಎಸ್ಪಿ ಅಮೃತಾ ಕೌರ್, ಡಿವೈಎಸ್ಪಿ ರೇಖಾ ಸಂಗವನ್, ತನಿಖಾಧಿಕಾರಿ ಹರ್ನಾಮ್ ಸಿಂಗ್ ಹಾಗೂ ಹೆಸರಿಸಿಲ್ಲದ ಹೆಡ್ ಕಾನ್ಸ್‌ಟೇಬಲ್ ಒಬ್ಬರು ’ತಮ್ಮ ಪತ್ನಿ ಹಾಗೂ ಪುತ್ರಿಯನ್ನು ಕೊಂದಿದ್ದಾರೆ’ ಎಂದು ಬನ್ಸಾಲ್ ಬರೆದಿದ್ದಾರೆಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಸಿಬಿಐ ಡಿಐಜಿಯವರನ್ನು ಬನ್ಸಾಲ್ ‘ಅಮಿತ್ ಶಾ ಅವರ ವ್ಯಕ್ತಿ’ ಎಂದೂ ಉಲ್ಲಖೇಖಿಸಿದ್ದರೆನ್ನಲಾಗಿದೆ.
‘‘ಅಮಿತ್ ಷಾ ಅವರ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಇಡೀ ದೇಶಕ್ಕೆ ಗೊತ್ತು. ಸಿಬಿಐ ಅವರ ಚೇಲಾಗಳ ಏಜನ್ಸಿಯಾಗುತ್ತಿರುವುದನ್ನು ನೋಡಿ ಯಾರಿಗಾದರೂ ಸುಮ್ಮನಿರಲು ಸಾಧ್ಯವೇ?’’ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News