×
Ad

6ದಿನ 36 ಸಾವಿರ ಕ್ಯೂಸೆಕ್ ನೀರು ಬಿಡಿ : ರಾಜ್ಯಕ್ಕೆ ಮತ್ತೆ ಸುಪ್ರೀಂ ಹುಕುಂ , ಅ.6ಕ್ಕೆ ವಿಚಾರಣೆ ಮುಂದೂಡಿಕೆ

Update: 2016-09-30 14:15 IST

ಹೊಸದಿಲ್ಲಿ , ಸೆ.30: ನೀರು ಬಿಡದಿರುವ ರಾಜ್ಯ ಸರಕಾರದ ನಿಲುವಿನ ಬಗ್ಗೆ ಮತ್ತೆ ಆಕ್ರೋಶಗೊಂಡಿರುವ ಸುಪ್ರೀಂ ಕೋರ್ಟ್ ಅಕ್ಟೋಬರ್ 1ರಿಂದ 6ರ ತನಕ 36 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ   ಮುಂದೂಡಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ  ಸುಪ್ರೀಂ ಕೋರ್ಟ್‌‌ ನಲ್ಲಿ ಮಧ್ಯಾಹ್ನ  ನಡೆಯಿತು.ಅರ್ಜಿಯ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌‌ನ ವಿಭಾಗೀಯ ಪೀಠ ಆರು ದಿನಗಳ ವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿತು. ಇದರೊಂದಿಗೆ ರಾಜ್ಯಕ್ಕೆ ಮತ್ತೆ ಆಘಾತ  ಉಂಟಾಗಿದೆ.

 ನೀರು ಬಿಡದ ಕರ್ನಾಟಕದ ನಿಲುವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಎರಡೂ ರಾಜ್ಯಗಳು ನ್ಯಾಯಾಲಯದ  ಆದೇಶ ಪಾಲಿಸಲೇಬೇಕು. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವೂ ಒಂದು. ದೇಶದ ನ್ಯಾಯಾಲಯದ ಘನತೆಗೆ ಕರ್ನಾಟಕದಿಂದ ಧಕ್ಕೆ ಉಂಟಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್‌‌ ಹಾಲ್ ನಂ.4ರಲ್ಲಿ ವಿಚಾರಣೆ ನಡೆಯಿತು. ನಿನ್ನೆ ಕೇಂದ್ರ ಜಲ ಸಂಪನ್ಮೂಲ ಸಚಿವ ಉಮಾಭಾರತಿ ಅವರ ನೇತೃತ್ವದಲ್ಲಿ ಎರಡು ರಾಜ್ಯಗಳ  ಮುಖ್ಯಮಂತ್ರಿಗಳ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಿರುವ ಬಗ್ಗೆ ಅಟಾರ್ನಿ ಜನರಲ್  ಮುಕುಲ್ ರೋಹ್ಟಗಿ ಮಾಹಿತಿ ನೀಡಿದರು. 

ರಾಜ್ಯದ ಪರ ವಕೀಲರಾದ ಫಾಲಿ  ಎಸ್‌ ನಾರಿಮನ್ ಅವರು  ಸುಪ್ರೀಂ ಕೋರ್ಟ್‌‌ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಟಿಪ್ಪಣಿ ಸಲ್ಲಿಸಿದರು. ಆದರೆ ವಾದ ಮಂಡಿಸಲಿಲ್ಲ. ರಾಜ್ಯ ಸರಕಾರ  ಸುಪ್ರೀಂ  ಕೋರ್ಟ್ ನ ಆದೇಶವನ್ನು ಪಾಲಿದ ಹಿನ್ನೆಲೆಯಲ್ಲಿ ನಾರಿಮನ್ ವಾದಿಸಲಿಲ್ಲ ಎಂದು ತಿಳಿದು ಬಂದಿದೆ.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ.  ಮೂರು ದಿನದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದು,  ನಾಳೆ ಸಂಜೆ 4ಗಂಟೆಯೊಳಗೆ ಮಂಡಳಿಯ ಪ್ರತಿನಿಧಿಗಳ ಮಾಹಿತಿ ನಮಗೆ ಕೊಡಿ ಎಂದು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.

ಕರ್ನಾಟಕದ ಪರ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಟಿಪ್ಪಣಿಯನ್ನು ಕೋರ್ಟ್ ಗೆ ಸಲ್ಲಿಸಿ, ಟಿಪ್ಪಣಿ ಬಿಟ್ಟು ಬೇರೆ ವಾದ ಮಾಡಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News