ಮೋದಿಯನ್ನು ಶ್ಲಾಘಿಸಿದ ರಾಹುಲ್‌ಗಾಂಧಿ
Update: 2016-09-30 22:31 IST
ಬುಲಂದ್‌ಷಹರ್, ಸೆ.30: ಭಾರತೀಯ ಸೇನೆ ನಡೆಸಿದ ‘ಸರ್ಜಿಕಲ್ ಸ್ಟ್ರೈಕ್’ ಕಾರ್ಯಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಹುದ್ದೆಗೇರಿದ ಎರಡೂವರೆ ವರ್ಷಾವಧಿಯಲ್ಲಿ ಮೋದಿ, ಪ್ರಧಾನಿ ಹುದ್ದೆಯ ಘನತೆಗೆ ತಕ್ಕ ಕಾರ್ಯ ಮಾಡಿದ ಏಕೈಕ ಉದಾಹರಣೆ ಇದಾಗಿದೆ ಎಂದಿದ್ದಾರೆ. ಕಿಸಾನ್ ಯಾತ್ರಾ ಅಂಗವಾಗಿ ಉತ್ತರಪ್ರದೇಶದಲ್ಲಿ ನಡೆಸಿದ ರೋಡ್‌ಶೋ ಸಂದರ್ಭ ಮಾತಾಡಿದ ರಾಹುಲ್, ತಾನು ಮತ್ತು ತನ್ನ ಪಕ್ಷ ಪ್ರಧಾನಿ ಕೈಗೊಂಡ ನಿರ್ಧಾರವನ್ನು ಬೆಂಬಲಿಸುತ್ತದೆ ಎಂದಿದ್ದಾರೆ. ಪ್ರಧಾನಿಯವರು ದೇಶದ ಪ್ರಧಾನಿಯಂತೆ ಕಾರ್ಯನಿರ್ವಹಿಸುವಾಗ ನಾನು ಮತ್ತು ನನ್ನ ಪಕ್ಷ ಅವರನ್ನು ಬೆಂಬಲಿಸುತ್ತದೆ. ಕಳೆದ ಎರಡೂವರೆ ವರ್ಷಾವಧಿಯಲ್ಲಿ ಮೋದಿ ಪ್ರಧಾನಿಯ ಹುದ್ದೆಯ ಘನತೆಯರಿತು ನಿರ್ವಹಿಸಿದ ಏಕೈಕ ಕಾರ್ಯವಿದು ಎಂದಿರುವ ರಾಹುಲ್, ದೇಶದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಿರುವ ಯೋಧರಿಗೆ ಗೌರವ ಅರ್ಪಿಸಿದರು .