ಸಮಾನ ನಾಗರಿಕ ಸಂಹಿತೆ : ಕಾನೂನು ಆಯೋಗಕ್ಕೆ ಸಹಕರಿಸುವುದಿಲ್ಲ- ಕಾಂತಪುರಂ ಉಸ್ತಾದ್

Update: 2016-10-15 07:30 GMT

ಕೋಝಿಕ್ಕೋಡ್, ಅ. 15: ಸಮಾನ ನಾಗರಿಕ ಸಂಹಿತೆಗೆ ರೂಪು ನೀಡಲಿಕ್ಕಾಗಿ ಕೇಂದ್ರ ಕಾನೂನು ಆಯೋಗ ಆರಂಭಿಸಿರುವ ಸಮೀಕ್ಷಾ ಕ್ರಮಗಳಿಗೆ ಯಾವ ರೀತಿಯಿಂದಲೂ ಸಹಕರಿಸುವುದಿಲ್ಲ ಎಂದುಕೇರಳ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್‌ಹೇಳಿದ್ದಾರೆ. ಅವರು ಕೇರಳ ಮುಸ್ಲಿಮ್ ಜಮಾಅತ್ ರಾಜ್ಯಸಮಿತಿ ಸಭೆಯಲ್ಲಿ ಮಾತಾಡುತ್ತಿದ್ದರು. ಜಾತ್ಯತೀತತೆ, ವಿವಿಧತೆಯಲ್ಲಿ ನಂಬಿಕೆಯಿರಿಸಿರುವ ನಾಗರಿಕ ಸಮಾಜವನ್ನು ಗರಿಷ್ಠ ಆತಂಕದಲ್ಲಿರಿಸುವ ಕ್ರಮಗಳು ಸರಕಾರದ ವತಿಯಿಂದ ನಡೆಯುತ್ತಿದೆ.

ತ್ರಿವಳಿ ತಲಾಕ್ ,ಬಹುಪತ್ನಿತ್ವ ವಿಷಯದಲ್ಲಿ ಹಿಂದಿನ ಕೇಂದ್ರ ಸರಕಾರ ಸ್ವೀಕರಿಸಿದ ನಿಲುವುಗಳಿಗೆ ವಿರುದ್ಧವಾಗಿ ಸುಪ್ರೀಂಕೋರ್ಟಿನಲ್ಲಿ ಮೋದಿ ಸರಕಾರ ಅಫಿದಾವಿತ್ ಸಲ್ಲಿಸಿರುವುದನ್ನು, ಸಾರ್ವಜನಿಕ ನಾಗರಿಕ ಸಂಹಿತೆಗಾಗಿ ಸರಕಾರದ ಅನಾವಶ್ಯಕ ಅವರಸರದ ಕ್ರಮವಾಗಿ ಪರಿಗಣಿಸಬೇಕಾಗಿದೆ ಎಂದು ಕಾಂತಪುರಂ ಹೇಳಿದ್ದಾರೆ. 

ವೈಯಕ್ತಿಕ ಜೀವನ ಸಂಹಿತೆಯು ಪ್ರತಿಯೊಂದೂ ಧಾರ್ಮಿಕ ಸಮುದಾಯಗಳ ದೈನಂದಿನ ಜೀವನಕ್ಕೆ ಸಂಬಂಧಿಸಿದ ವಿಷಯವಾಗಿದೆ. ಹೀಗಿದ್ದೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಯಾವುದೇಕ್ರಮವೂ ಸಂವಿಧಾನ ಕೊಡಮಾಡುವ ಧಾರ್ಮಿಕಸ್ವಾತಂತ್ರ್ಯದ ವಿರುದ್ಧ ನಡೆಸುವ ಹಸ್ತಕ್ಷೇಪವಾಗಿ ಪರಿಗಣಿಸಬೇಕಾಗಿದೆ ಎಂದು ಎಪಿ ಉಸ್ತಾದ್ ಹೇಳಿದ್ದಾರೆ. ಸಭೆಯಲ್ಲಿ ಇಬ್ರಾಹೀಂ ಖಲೀಲುಲ್ ಬುಖಾರಿ, ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್, ಅಬ್ದುರ್ರಹ್ಮಾನ್ ಪೈಝಿ, ಪ್ರೋ. ಕೆ.ಎಂ.ಎ. ರಹೀಂ, ಎನ್. ಅಲಿ ಅಬ್ದುಲ್ಲ ಮುಂತಾದವರು ಉಪಸ್ಥಿತರಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News