×
Ad

ಸುಪ್ರೀಂನಲ್ಲಿ ಲೋಧಾ ಸಮಿತಿಯ ಸುಧಾರಣೆಗೆ ಬಿಸಿಸಿಐ ವಿರೋಧ ಮುಂದುವರಿಕೆ

Update: 2016-10-15 22:57 IST

 ಹೊಸದಿಲ್ಲಿ, ಅ.15: ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಲೋಧಾ ಸಮಿತಿ ಸಲಹೆ ಮಾಡಿರುವ ಕೆಲವು ಸುಧಾರಣೆಗಳನ್ನು ವಿರೋಧಿಸುವ ತನ್ನ ನಿಲುವನ್ನು ಕಾಯ್ದುಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಈ ಮೂಲಕ ಸುಪ್ರೀಂಕೋರ್ಟ್-ಬಿಸಿಸಿಐ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ.

 ಕೆಲವು ನಿರ್ದಿಷ್ಟ ಸುಧಾರಣೆಗಳನ್ನು ಜಾರಿಗೆ ತರಲು ಸಾಧ್ವವಿಲ್ಲ. ಸೋಮವಾರ ನಮ್ಮ ವಕೀಲರಾದ ಕಪಿಲ್ ಸಿಬಲ್ ನಮ್ಮ ಪರ ವಾದ ಮಂಡಿಸಲಿದ್ದಾರೆ. ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಅಫಿಡವಿಟ್‌ನ್ನ್ನು ಸೋಮವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಶನಿವಾರ ಇಲ್ಲಿ ನಡೆದ ಸಭೆಯ ಬಳಿಕ ಬಿಸಿಸಿಐನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಒಂದೇ ರಾಜ್ಯ, ಒಂದೇ ಮತ, ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ, ವಯೋಮಿತಿ ನಿಗದಿ ಸಂಕೀರ್ಣ ವಿಷಯಗಳಾಗಿವೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News