×
Ad

ಭಾರತದ ಕಬಡ್ಡಿ ನಾಯಕ ಅನೂಪ್ ನಿವೃತ್ತಿ

Update: 2016-10-17 23:57 IST

ಅಹ್ಮದಾಬಾದ್, ಅ.17: ಭಾರತದ ಕಬಡ್ಡಿ ತಂಡದ ನಾಯಕ ಅನೂಪ್ ಕುಮಾರ್ ನಿವೃತ್ತಿಯ ಸುಳಿವು ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್ ಕೊನೆಗೊಂಡ ತಕ್ಷಣ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಯಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.

ಭಾರತದ ಪ್ರಮುಖ ಆಟಗಾರನಾಗಿರುವ ಅನೂಪ್, ಪ್ರೋ ಕಬಡ್ಡಿ ಲೀಗ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

‘‘ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಕಬಡ್ಡಿ ವಿಶ್ವಕಪ್ ಮುಗಿದ ತಕ್ಷಣ ಅಂತಾರಾಷ್ಟ್ರೀಯ ಕಬಡ್ಡಿಯಿಂದ ನಿವೃತ್ತಿಯಾಗುವೆ. ವಿಶ್ವಕಪ್ ಗೆಲ್ಲುವುದು ನನ್ನ ಕನಸು. ಈ ವರ್ಷ ಆ ಕನಸು ನನಸಾಗುವ ವಿಶ್ವಾಸವಿದೆ ಎಂದು ಅನೂಪ್ ತಿಳಿಸಿದ್ದಾರೆ.

2012ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿರುವ ಅನೂಪ್ 2006ರಲ್ಲಿ ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. 2006ರ ಬಳಿಕ ತಂಡದ ಖಾಯಂ ಸದಸ್ಯರಾಗಿದ್ದ ಅನೂಪ್ ಉಪನಾಯಕನಾಗಿ ಆಯ್ಕೆಯಾಗಿದ್ದರು. 2016ರಲ್ಲಿ ನಾಯಕನಾಗಿ ಭಡ್ತಿ ಪಡೆದಿದ್ದರು.

ಹರ್ಯಾಣದ ಗುರ್ಗಾಂವ್ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಜಯಿಸಿರುವ ಅನೂಪ್ ಹರ್ಯಾಣದ ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನದ ಪದಕ ಗೆಲ್ಲಲು ಅನೂಪ್ ಪ್ರಮುಖ ಪಾತ್ರವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News