×
Ad

ಪುಣೆಯಲ್ಲಿ ಸಹಪಾಠಿಗಳಿಂದ ವಿದ್ಯಾರ್ಥಿನಿಯ ಅತ್ಯಾಚಾರ

Update: 2016-10-23 14:19 IST

ಪುಣೆ,ಅಕ್ಟೋಬರ್ 23: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಸಹಪಾಠಿಗಳು ಅತ್ಯಾಚಾರಗೈದ ಘಟನೆ ಪುಣೆ ರೈಸೋನಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹದಿನೆಂಟು ವರ್ಷ ವಯಸ್ಸಿನ ಪ್ರಸ್ತುತ ಕಾಲೇಜಿನ ಒಂದನೆ ವರ್ಷದ ವಿದ್ಯಾರ್ಥಿನಿಯನ್ನು ಸಹಪಾಠಿಗಳಾದ ಮಹೇಶ್ ಗೋರ್ಡೆ, ಕರಣ್ ಗೋಗೆ ಎಂಬವರು ಅತ್ಯಾಚಾರಗೈದಿದ್ದು, ಕಾಲೇಜಿಗೆ ಸಂಬಂಧವಿಲ್ಲದ ಇನ್ನೋರ್ವ ಅವಿನಾಶ್ ಶೇಕ್ ಎಂಬಾತ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ, ಸಂತ್ರಸ್ತ ವಿದ್ಯಾರ್ಥಿನಿಯ ದೂರಿನ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

 ಅಕ್ಟೋಬರ್ 18ಕ್ಕೆ ವಿದ್ಯಾರ್ಥಿನಿ ತನ್ನ ಮೊದಲ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಹಾಸ್ಟೆಲ್‌ಗೆ ಹೋಗುತ್ತಿದ್ದಾಗ ಸಹಪಾಠಿಯಾದ ಕರಣ್ ಗೋಗೆ ತನ್ನ ಪ್ರಾಜೆಕ್ಟ್‌ಪೂರ್ತಿ ಮಾಡಲು ಸಹಕರಿಸಬೇಕೆಂದು ವಿನಂತಿಸಿ ತನ್ನ ಕೋಣೆಗೆ ಕರೆದು ಕೊಂಡು ಹೋಗಿ ಅವಳನ್ನು ಅತ್ಯಾಚಾರಗೈದಿದ್ದ.

ಇದನ್ನು ಮನೆಯಲ್ಲಿ ಹೇಳಿದರೆ ಕಲಿಕೆ ನಿಲ್ಲಿಸುತ್ತಾರೆ ಎಂದು ಹೆದರಿ ವಿದ್ಯಾರ್ಥಿನಿ ಮನೆಯಲ್ಲಿ ಹೇಳಿರಲಿಲ್ಲ. ಮರುದಿವಸ ಘಟನೆ ತನೆಗೆ ಗೊತ್ತಾಗಿದೆ ಎಂದು ಹೇಳಿದ ಮಹೇಶ್ ಗೋರ್ಡೆ ಕರಣ್‌ನನ್ನು ಬಂಧಿಸಲು ನೆರವಾಗುತ್ತೇನೆ. ಕೇಸು ಗಟ್ಟಿಯಾಗಲು ಘಟನೆ ನಡೆದ ಸ್ಥಳವನ್ನು ತೋರಿಸು ಎಂದು ನಂಬಿಸಿ ಅಲ್ಲಿಗೆ ಕರೆದೊಯ್ದು ಆತ ಕೂಡ ಅತ್ಯಾಚಾರಗೈದಿದ್ದಾನೆ ಎಂದು ದೂರಿನಲ್ಲಿ ವಿದ್ಯಾರ್ಥಿನಿ ತಿಳಿಸಿದ್ದಾಳೆ.

 ನಂತರ ಕಾಲೇಜಿಗೆ ಸಂಬಂಧವಿಲ್ಲದ ಹೊರಗಿನ ವ್ಯಕ್ತಿ ಅವಿನಾಶ್ ಶೇಕ್ ಎಂಬಾತ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದ. ಆನಂತರ ವಿದ್ಯಾರ್ಥಿನಿ ಘಟನೆಯ ಕುರಿತು ತನ್ನ ಅಧ್ಯಾಪಕಿ ಮತ್ತು ಇತರ ಗೆಳತಿಯರಿಗೆ ತಿಳಿಸಲು ಮುಂದಾಗಿದ್ದಾಳೆ. ಕಾಲೇಜು ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮಕೈಗೊಳ್ಳದ್ದರಿಂದ ಅಂತಿಮವಾಗಿ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News