ಕಾಸರಗೋಡು: ಮಾರ್ಚ್ 8ರಿಂದ 23ರವರೆಗೆ ಎಸೆಸೆಲ್ಸಿ ಪರೀಕ್ಷೆ
Update: 2016-10-26 09:55 IST
ಕಾಸರಗೋಡು, ಅ.26: ಕೇರಳ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 8ರಿಂದ 23ರ ತನಕ ನಡೆಯಲಿದೆ. ಪರೀಕ್ಷಾ ಶುಲ್ಕ ಪಾವತಿಗೆ ನವಂಬರ್ 3ರಿಂದ 14 ರ ತನಕ ಅವಕಾಶ ಕಲ್ಪಿಸಲಾಗಿದೆ. ದಂಡ ಸಹಿತ ನ.16ರಿಂದ 21ರ ತನಕ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಪಾವತಿಸಬಹುದಾಗಿದೆ.
ಪ್ರತೀ ಪರೀಕ್ಷೆಗಳು ಅಪರಾಹ್ನ 1:30ರಿಂದ ಸಂಜೆ 3:30ರ ತನಕ ನಡೆಯಲಿದೆ.