ಹಕ್ಕಿ ಜ್ವರ: ಶಕ್ತಿ ಸ್ಥಳದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ತಿಥಿ 'ಹುತಾತ್ಮ ದಿನಾಚರಣೆ'ಗೆ ಅಡ್ಡಿ..!
ಹೊಸದಿಲ್ಲಿ, ಅ.30: ಹಕ್ಕಿ ಜ್ವರ ಪರಿಣಾಮ ರಾಜಧಾನಿಗೆ ತಟ್ಟಿದ ಜತೆಗೆ ಕಾಂಗ್ರೆಸ್ ಪಕ್ಷಕ್ಕೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ತಿಥಿಯನ್ನು ಶಕ್ತಿ ಸ್ಥಳದಲ್ಲಿ ಆಚರಿಸಲು ಅಡ್ಡಿಪಡಿಸಿದೆ. ಶಕ್ತಿಸ್ಥಳದಲ್ಲಿ ಎರಡು ಹಕ್ಕಿಗಳು ಸತ್ತು ಬಿದ್ದಿರುವುದು ಇದಕ್ಕೆ ಕಾರಣ.
ಈ ಮೊದಲು ಅ.31ರಂದು ಕಾಂಗ್ರೆಸ್ ದಿವಂಗತ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಪುಣ್ಯ ತಿಥಿ ಅಂಗವಾಗಿ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಶಕ್ತಿ ಸ್ಥಳದಲ್ಲಿ ಆಯೋಜಿಸುವ ನಿರ್ಧಾರ ಕೈಗೊಂಡಿತ್ತು. ಆದರೆ ಹಕ್ಕಿಗಳು ಸತ್ತು ಬಿದ್ದಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಇದೀಗ ಇಂದಿರಾ ಗಾಂಧಿ ಪುಣ್ಯ ತಿಥಿ ಕಾರ್ಯಕ್ರಮವನ್ನು ದೀನ್ ದಯಾಲ್ ಉಪಾಧ್ಯಾಯ ರಸ್ತೆಯಲ್ಲಿರುವ ದಿಲ್ಲಿ ಪ್ರದೇಶ ಕಾಂಗ್ರೆಸ್ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಶರ್ಮಿಸ್ಥ ಮುಖರ್ಜಿ ತಿಳಿಸಿದ್ದಾರೆ.
ಹಕ್ಕಜ್ವರದ ಪರಿಣಾಮ ತಟ್ಟುವುದನ್ನು ತಪ್ಪಿಸುವ ಉದ್ದೇಶಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.