ಡಿ.17ಕ್ಕೆ ಡಬ್ಲ್ಯುಬಿಎ ಪ್ರಶಸ್ತಿ ಉಳಿಸಿಕೊಳ್ಳಲು ವಿಜೇಂದರ್ ಹೋರಾಟ

Update: 2016-11-08 17:35 GMT

ಹೈದರಾಬಾದ್, ನ.8: ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಡಿ.17 ರಂದು ಸ್ವದೇಶದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡಬ್ಲುಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡ್ಲ್‌ವೇಟ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದ್ದಾರೆ.

ವಿಜೇಂದರ್ ಎದುರಾಳಿ ಯಾರೆಂದು ಇನ್ನೂ ದೃಢಪಟ್ಟಿಲ್ಲ.

‘‘ವಿಜೇಂದರ್ ಹೊಸದಿಲ್ಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ 2016ರ ಡಿ.17 ರಂದು ನಡೆಯಲಿರುವ ಡಬ್ಲುಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡ್ಲ್‌ವೇಟ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದ್ದಾರೆ ಎಂದು ಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.

ಬಾಕ್ಸಿಂಗ್ ಕಣದಲ್ಲಿ ಭಾರತದ ಅಖಿಲ್ ಕುಮಾರ್ ಹಾಗೂ ಜಿತೇಂದರ್ ಕುಮಾರ್ ಅವರು ಭಾಗವಹಿಸಲಿದ್ದಾರೆ. ಈ ಎಲ್ಲ ಬಾಕ್ಸರ್‌ಗಳ ಎದುರಾಳಿಗಳನ್ನು ಶೀಘ್ರವೇ ಘೋಷಿಸಲಾಗುವುದು.

 ವಿಜೇಂದರ್ ವೃತ್ತಿಪರ ಬಾಕ್ಸರ್ ಆಗಿ ಪರಿವರ್ತನೆ ಆದ ಬಳಿಕ 7 ಪಂದ್ಯಗಳನ್ನೂ ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ. 6 ನಾಕೌಟ್ ಪಂದ್ಯಗಳಲ್ಲಿ 27 ಸುತ್ತು ಆಡಿದ್ದಾರೆ. ಹರ್ಯಾಣದ ಬಾಕ್ಸರ್ ವಿಜೇಂದರ್ ತವರು ಪ್ರೇಕ್ಷಕರ ಸಮ್ಮುಖದಲ್ಲಿ ವಿಶ್ವ ಬಾಕ್ಸಿಂಗ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಹೋರಾಡಲಿದ್ದಾರೆ.

ನಾನು ಕಳೆದ ಎರಡು ತಿಂಗಳಿಂದ ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿದ್ದೆ. ಮುಂದಿನ ಬಾಕ್ಸಿಂಗ್ ಸ್ಪರ್ಧೆಗಾಗಿ ಕಠಿಣ ತರಬೇತಿ ನಡೆಸಿರುವೆ. ನನ್ನ ತರಬೇತುದಾರರು ನನಗೆ ಕಠಿಣ ತರಬೇತಿ ನೀಡಿದ್ದು, ಇದು ನನಗೆ ಬಲಶಾಲಿ ಪಂಚ್ ನೀಡಲು ನೆರವಾಗಿದೆ’’ ಎಂದು ವಿಜೇಂದರ್ ತಿಳಿಸಿದ್ದಾರೆ.

 ‘‘ವರ್ಲ್ಡ್ ಬಾಕ್ಸಿಂಗ್ ಸಂಘಟನೆ(ಡಬ್ಲುಬಿಒ) ಸಲಹೆ ನೀಡುವ ಯಾವುದೇ ಬಾಕ್ಸರ್‌ಗಳ ವಿರುದ್ಧ ಆಡಲು ನಾನು ಸಜ್ಜಾಗಿರುವೆ. ಹೆಮ್ಮೆಯಿಂದ ತಾನು ಗೆದ್ದಂತಹ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸವಿದೆ. ನಾನು 2016ರ ಡಿ.17ರ ಪಂದ್ಯವನ್ನು ಎದುರು ನೋಡುತ್ತಿರುವೆ. ಇತಿಹಾಸ ಮರುಕಳಿಸುವ ನಿರೀಕ್ಷೆಯಲ್ಲಿರುವೆ’’ ಎಂದು ವಿಜೇಂದರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News