×
Ad

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ನೂತನ ಮುಖ್ಯಸ್ಥರಾಗಿ ಇಶಾತ್ ಹುಸೈನ್ ನೇಮಕ

Update: 2016-11-10 10:52 IST

ಮುಂಬೈ, ನ.10: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ(ಟಿಸಿಎಸ್) ನೂತನ ಮುಖ್ಯಸ್ಥ ರಾಗಿ ಇಶಾತ್ ಹುಸೈನ್‌ರನ್ನು ನೇಮಕ ಮಾಡಲಾಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ ಅತಿದೊಡ್ಡ ಪಾಲುದಾರಿಕೆ ಹೊಂದಿರುವ ಟಾಟಾ ಸನ್ಸ್ ಕಂಪೆನಿ ಸೈರಸ್ ಮಿಸ್ತ್ರಿ ಬದಲಿಗೆ ಹುಸೈನ್‌ರನ್ನು ಚೇರ್ಮನ್ ಆಗಿ ನೇಮಕಗೊಳಿಸಲಾಗಿದೆ ಎಂದು ಷೇರು ಮಾರುಕಟ್ಟೆಗೆ ಗುರುವಾರ ಮಾಹಿತಿ ನೀಡಿದೆ.

ಟಿಸಿಎಸ್ ಮಂಡಳಿಯ ನಿರ್ದೇಶಕರಾಗಿದ್ದ ಹುಸೈನ್ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡುವ ತನಕ ಹಂಗಾಮಿ ಚೇರ್ಮನ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಅ.24 ರಂದು ಟಾಟಾ ಸನ್ಸ್ ಕಂಪೆನಿಯು ಮಿಸ್ತ್ರಿ ಅವರನ್ನು ಟಾಟಾ ಸಮೂಹದ ಚೇರ್ಮನ್ ಹುದ್ದೆಯಿಂದ ಉಚ್ಚಾಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News