ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ: ಜವಾನ ಹುತಾತ್ಮ
Update: 2016-11-13 00:19 IST
ಶ್ರೀನಗರ, ನ.12: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೇರನ್ ವಲಯದ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಸೈನಿಕರು ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಭೂ ಸೇನಾ ಜವಾನನೊಬ್ಬ ಹುತಾತ್ಮನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಕೇರನ್ ವಲಯದಲ್ಲಿ ಇಂದು ಮುಂಜಾನೆ ಪಾಕಿಸ್ತಾನಿ ಪಡೆಗಳು ಗುಂಡು ಹಾಗೂ ಶೆಲ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದವು. ಘಟನೆಯಲ್ಲಿ ಸೇನಾ ಜವಾನ ಹರೀಶ್ ಬಾದರ್ಯ ಎಂಬವರು ಹುತಾತ್ಮರಾರು. ಈಗ ಗುಂಡು ಹಾರಾಟ ನಿಂತಿದ್ದು, ಮುಂದಿನ ವಿವರ ಕಾಯಲಾಗುತ್ತಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.