ಅರುಣಾಚಲ: ಐಆರ್‌ಬಿಎಸ್ ಜವಾನನ ಆತ್ಮಹತ್ಯೆ
Update: 2016-11-13 00:20 IST
ಇಟಾನಗರ್, ನ.12: ಅರುಣಾಚಲಪ್ರದೇಶದ ನಿರ್ಜುಲಿ ಹಾಗೂ ಬಂದೇರ್‌ದೇವಾಗಳ ನಡುವಣ ರಾ.ಹೆ. 415ರಲ್ಲಿ ಭಾರತೀಯ ಮೀಸಲು ಬೆಟಾಲಿಯನ್‌ನ ಜವಾನನೊಬ್ಬ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರಿಂದು ತಿಳಿಸಿದ್ದಾರೆ.
ನಿನ್ನೆ ಪತ್ತೆಯಾಗಿರುವ ಮೃತದೇಹವು 4ನೆ ಐಆರ್‌ಬಿಎಸ್ ವಿಶೇಷ ಕಾರ್ಯಪಡೆಯ ಕಾನ್‌ಸ್ಟೇಬಲ್ ಅಜಿತ್ ಸೋನೊ ಎಂಬಾತನೆಂದು ಗುರುತಿಸಲಾಗಿದೆ.
ಸೋನೊ, ನ.9ರಿಂದ ಕಾಣೆಯಾಗಿದ್ದನು. ಎಸ್‌ಟಿಎಫ್‌ನ ಕಂಪೆನಿ ಕಮಾಂಡರ್ ಈ ಬಗ್ಗೆ ಬಂದೇರ್‌ದೇವಾ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ದೂರು ದಾಖಲಿಸಿದ್ದರು.
ಸೋನೊ ತನ್ನ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹದ ತಲೆ ಹಾಗೂ ಕುತ್ತಿಗೆಯಲ್ಲಿ ಎರಡು ಗುಂಡಿನ ಗಾಯಗಳಿವೆಯೆಂದು ಪೊಲೀಸ್ ಅಧೀಕ್ಷಕ ಡಾ.ಎ.ಕೋವನ್ ತಿಳಿಸಿದ್ದಾರೆ.