×
Ad

ನಾಳೆ ಪೋಸ್ಟ್ ಆಫೀಸ್‌ಗೆ ರಜೆ, ಬ್ಯಾಂಕ್ ಓಪನ್

Update: 2016-11-13 18:24 IST

  ಹೊಸದಿಲ್ಲಿ, ನ.13: ಗುರುನಾನಕ್ ಜಯಂತಿ ಪ್ರಯುಕ್ತ ಸೋಮವಾರ ದೇಶಾದ್ಯಂತ ಎಲ್ಲ ಅಂಚೆಕಚೇರಿಗಳು ಸೇರಿದಂತೆ ಇತರ ಕೇಂದ್ರ ಸರಕಾರಿ ಕಚೇರಿಗಳಿಗೆ ರಜೆ ಸಾರಲಾಗಿದೆ. ಆದರೆ, ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರಕಾರ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಎಲ್ಲ ಬ್ಯಾಂಕ್‌ಗಳು ರಜಾದಿನವಾದ ಶನಿವಾರ ಹಾಗೂ ರವಿವಾರ ಕಾರ್ಯನಿರ್ವಹಿಸಿದ್ದವು. ಸೋಮವಾರ ಕೂಡ ಬ್ಯಾಂಕ್ ಗಳು ತೆರೆದಿರುತ್ತದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News