ಅದಿತಿ ಮುಡಿಗೆ ಹೀರೊ ವುಮೆನ್ಸ್ ಇಂಡಿಯನ್ ಓಪನ್ ಪ್ರಶಸ್ತಿ
Update: 2016-11-13 23:31 IST
ಗುರುಗ್ರಾಮ್, ನ.13: ಹೀರೋ ವುಮೆನ್ಸ್ ಇಂಡಿಯನ್ ಓಪನ್‌ನ್ನು ಜಯಿಸಿರುವ ಭಾರತದ ಯುವ ಗಾಲ್ಫ್ ತಾರೆ ಅದಿತಿ ಅಶೋಕ್ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿಕೊಳ್ಳುವುದರೊಂದಿಗೆ ಹೊಸ ಇತಿಹಾಸ ಬರೆದರು.
ಲೇಡಿಸ್ ಯುರೋಪಿಯನ್ ಟೂರ್ ಪ್ರಶಸ್ತಿಯಾಗಿರುವ ಇಂಡಿಯನ್ ಓಪನ್‌ನ ಅಂತಿಮ ಸುತ್ತಿನಲ್ಲಿ 72 ಅಂಕ ಗಳಿಸಿದ ಬೆಂಗಳೂರಿನ 18ರ ಪ್ರಾಯದ ಅದಿತಿ ಪ್ರಶಸ್ತಿ ತನ್ನದಾಗಿಸಿಕೊಂಡರು.
ಅಮೆರಿಕದ ಬ್ರಿಟನಿ ಲಿನ್ಸಿಕೊಮ್ ಹಾಗೂ ಸ್ಪೇನ್‌ನ ಬೆಲೆನ್ ಮೊರೊ ಟೈ ಸಾಧಿಸಿ ಎರಡನೆ ಸ್ಥಾನ ಪಡೆದರು. ಪ್ರಶಸ್ತಿ ಜಯಿಸಿರುವ ಅದಿತಿ 54,988.20 ಯುರೋಸ್‌ನ್ನು ಗೆದ್ದುಕೊಂಡರು.
ಅದಿತಿ ಅಶೋಕ್ ರಿಯೋ ಒಲಿಂಪಿಕ್ಸ್‌ನಲ್ಲಿ ಕೂಡ ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದರು.