ದಿಲ್ಲಿ ರಣಜಿ ತಂಡಕ್ಕೆ ಗಂಭೀರ್ ನಾಯಕ
ಹೊಸದಿಲ್ಲಿ, ನ.17: ಭಾರತೀಯ ತಂಡದಿಂದ ಬಿಡುಗಡೆ ಗೊಂಡಿರುವ ಹಿರಿಯ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್‌ರನ್ನು ರಾಜಸ್ಥಾನ ವಿರುದ್ಧ ರಣಜಿ ಪಂದ್ಯಕ್ಕೆ ದಿಲ್ಲಿ ತಂಡದ ನಾಯಕನನ್ನಾಗಿ ನೇಮಕ ಮಾಡಲು ಡಿಡಿಸಿಎ ನಿರ್ಧರಿಸಿದೆ.
ಭಾರತ ಕ್ರಿಕೆಟ್ ತಂಡದಲ್ಲಿ ಆಡುವ 11ರ ಬಳಗದಿಂದ ಹೊರಗುಳಿದಿರುವ ವೇಗದ ಬೌಲರ್ ಇಶಾಂತ್ ಶರ್ಮ ಆಯ್ಕೆ ಸಮಿತಿ ಪ್ರಕಟಿಸಿರುವ 16 ಸದಸ್ಯರ ತಂಡದಲ್ಲಿ 16ನೆ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ನೆಟ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ಇಶಾಂತ್ ದಿಲ್ಲಿ ರಣಜಿ ತಂಡದಲ್ಲಿ ಆಡುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ.
ಕೇರಳದ ವಯನಾಡಿನಲ್ಲಿ ನ.21 ರಿಂದ ಆರಂಭವಾಗಲಿರುವ ರಣಜಿ ಪಂದ್ಯದಲ್ಲಿ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಲಿದ್ದಾರೆ.
ತಂಡ: ಗೌತಮ್ ಗಂಭೀರ್, ಉನ್ಮುಕ್ತ್ ಚಂದ್, ಶಿಖರ್ ಧವನ್, ಧ್ರುವ್ ಶೊರೆ, ಮಿಲಿಂದ್ ಕುಮಾರ್, ನಿತಿಶ್ ರಾಣಾ, ರಿಷಬ್ ಪಂತ್, ಮನನ್ ಶರ್ಮ, ಪ್ರದೀಪ್ ಸಾಂಗ್ವನ್, ನವ್‌ದೀಪ್ ಸೈನಿ, ಸುಮಿತ್ ನರ್ವಾಲ್, ವಿಕಾಶ್ ಟೊಕಾಸ್, ಸಾರ್ಥಕ್ ರಂಜನ್, ಪುಲ್ಕಿತ್ ನಾರಂಗ್, ವರುಣ್ ಸೂಡ್, ಇಶಾಂತ್ ಶರ್ಮ.