ಎರಡನೆ ಟೆಸ್ಟ್ : ಇಂಗ್ಲೆಂಡ್ 255ಕ್ಕೆ ಆಲೌಟ್
Update: 2016-11-19 14:10 IST
ವಿಶಾಖಪಟ್ಟಣ, ನ.19: ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಸ್ಪಿನ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 102.5 ಓವರ್ ಗಳಲ್ಲಿ 255 ರನ್ ಗಳಿಗೆ ಆಲೌಟಾಗಿದೆ.
ಇದರೊಂದಿಗೆ ಭಾರತ 205 ರನ್ ಗಳ ಮೇಲುಗೈ ಸಾಧಿಸಿದೆ. ರವಿಚಂದ್ರನ್ ಅಶ್ವಿನ್ 67ಕ್ಕೆ 5 ವಿಕೆಟ್ ಉಡಾಯಿಸಿ ಇಂಗ್ಲೆಂಡ್ ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು. ಬೆನ್ ಸ್ಟೋಕ್ಸ್ 70 ರನ್, ಬೈರ್ ಸ್ಟೋವ್ 53 ರನ್ ಮತ್ತು ಆದಿಲ್ ರಶೀದ್ ಔಟಾಗದೆ 32 ರನ್ ಗಳಿಸಿದರು.
ಭಾರತ ಮೊದಲ ಇನಿಂಗ್ಸ್ ನಲ್ಲಿ 455 ರನ್ ಗಳಿಗೆ ಆಲೌಟಾಗಿತ್ತು.