×
Ad

ಝಾಕಿರ್ ನಾಯ್ಕ್ ವಿರುದ್ಧ ಕೇಸು ದಾಖಲು, ಮೂಲಭೂತ ಹಕ್ಕು ಉಲ್ಲಂಘನೆ: ಕೆಎನ್‌ಎಂ

Update: 2016-11-21 11:49 IST

ಕೋಝಿಕ್ಕೋಡ್,ನ. 21: ಸಂವಿಧಾನ ನೀಡುವ ಧರ್ಮಪ್ರಚಾರ ಸ್ವಾತಂತ್ರ್ಯವನ್ನು ಬೆದರಿಸಿ ಇಲ್ಲದಾಗಿಸುವ ಯೋಜನಾಬದ್ಧ ಕ್ರಮವು ಜಾತ್ಯತೀತ ಭಾರತಕ್ಕೆ ಒಪ್ಪುವಂತಹದ್ದಲ್ಲ ಎಂದು ಕೋಝಿಕ್ಕೋಡ್‌ನಲ್ಲಿ ನಡೆದ ನದ್ವತುಲ್ ಮುಜಾಹಿದೀನ್ (ಕೆ.ಎಂ,ಎನ್.) ರಾಜ್ಯಮಟ್ಟದ ಸಭೆ ಅಭಿಪ್ರಾಯವನ್ನು ವ್ಯಕ್ತಪಡಿಸಿದೆಯೆಂದು ವರದಿಯಾಗಿದೆ.

ಮುಂಬೈಯನ್ನು ಕೇಂದ್ರವಾಗಿಟ್ಟು ಶೈಕ್ಷಣಿಕ-ಬೋಧನಾ ಚಟುವಟಿಕೆಗಳನ್ನು ನಡೆಸುತ್ತಿರುವ ಡಾ. ಝಾಕಿರ್ ನಾಯ್ಕ್ ರ ನೇತೃತ್ವದ ಐಆರ್‌ಎಫ್‌ನ್ನು ಸರಿಯಾದ ತನಿಖೆ ನಡೆಸದೆನಿಷೇಧಿಸಿದ್ದು ಖಂಡನೀಯ ಎಂದು ಸಭೆ ಹೇಳಿದೆ.

ಅಪರಾಧ ಏನೆಂದು ಸಾಬೀತುಗೊಳ್ಳದೆ ಊಹಾಪೋಹಗಳನ್ನು ಸೃಷ್ಟಿಸಿ ಇಸ್ಲಾಮಿಕ್ ವ್ಯಕ್ತಿತ್ವಗಳು ಮತ್ತು ಸಂಸ್ಥೆಗಳನ್ನು ನಾಶಪಡಿಸುವ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ನೋಟು ರದ್ದು ಪಡಿಸಿದ್ದರಿಂದ ಜನರು ಬೀದಿಯಲ್ಲಿ ಅಲೆದಾಡುತ್ತಿರುವ ಸಂದರ್ಭದ ಲಾಭ ಪಡೆದು ಯುಎಪಿಎಯಂತಹ ಕರಾಳ ಕಾನೂನುಗಳನ್ನು ಮುಸ್ಲಿಂ ಹೆಸರಿರುವ ಧಾರ್ಮಿಕ-ಶೈಕ್ಷಣಿಕ ಕೇಂದ್ರಗಳನ್ನು ಮುಚ್ಚಿಸಲು ಯತ್ನಿಸುವುದು ಅನ್ಯಾಯವಾಗಿದೆ. ಸಾಕಷ್ಟು ಸಿದ್ಧತೆ ನಡೆಸದೆ ನೋಟುಗಳನ್ನು ಹಿಂಪಡೆದಿರುವುದರಿಂದ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಕೋಝಿಕ್ಕೋಡ್‌ನಲ್ಲಿ ನಡೆದ ಕೆಎನ್‌ಎಂ ಸಭೆ ಆಗ್ರಹಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News