ಚೆನ್ನೈ ಓಪನ್: ರಾಮ್‌ಕುಮಾರ್‌ಗೆ ವೈಲ್ಡ್‌ಕಾರ್ಡ್
Update: 2016-11-23 23:01 IST
ಚೆನ್ನೈ, ನ.23: ಭಾರತದ ಯುವ ಟೆನಿಸ್ ತಾರೆ, ಡೇವಿಸ್‌ಕಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿರುವ ರಾಮ್‌ಕುಮಾರ್ ರಾಮನಾಥನ್ ಚೆನ್ನೈ ಓಪನ್‌ನಲ್ಲಿ ಸಿಂಗಲ್ಸ್ ವಿಭಾಗದಲ್ಲಿ ವೈಲ್ಡ್ ಕಾರ್ಡ್ ಪಡೆದಿದ್ದಾರೆ.
ಚೆನ್ನೈ ಮೂಲದ ರಾಮ್‌ಕುಮಾರ್ 2014ರ ಚೆನ್ನೈ ಓಪನ್‌ನಲ್ಲಿ ತಮ್ಮದೇ ದೇಶದ ಸೋಮ್‌ದೇವ್ ದೇವ್‌ರಾಮನ್‌ರನ್ನು ಮಣಿಸಿದ್ದರು.
‘‘ನಾವೆಲ್ಲರೂ ರಾಮ್ ಮೇಲೆ ಬಹಳ ನಂಬಿಕೆ ಇಟ್ಟಿದ್ದೇವೆ. ಅವರು ವಿಶ್ವ ಟೆನಿಸ್‌ನಲ್ಲಿ ಇನ್ನಷ್ಟು ದೀರ್ಘಕಾಲ ಇರಲಿದ್ದಾರೆಂದು ನಾವು ನಂಬಿದ್ದೇವೆ. ಭಾರತದ ಟೆನಿಸ್ ಅಭಿಮಾನಿಗಳು ಅವರನ್ನು ಇಷ್ಟಪಡುತ್ತಾರೆ. ಅವರಿಗೆ ಬೇಕಾದ ನೆರವನ್ನು ನಾವು ನೀಡಲಿದ್ದೇವೆ’’ ಎಂದು ತಮಿಳುನಾಡು ಟೆನಿಸ್ ಸಂಸ್ಥೆಯ ಅಧ್ಯಕ್ಷ ಎಂಎ ಅಲಗಪ್ಪನ್ ಹೇಳಿದ್ದಾರೆ.
ಚೆನ್ನೈ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.6ನೆ ಆಟಗಾರ ಹಾಗೂ 2014ರ ಯುಎಸ್ ಓಪನ್ ಚಾಂಪಿಯನ್ ಮರಿನ್ ಸಿಲಿಕ್ ಹಾಗೂ ವಿಶ್ವದ ನಂ.14ನೆ ಆಟಗಾರ ಸ್ಪೇನ್‌ನ ರಾಬರ್ಟೊ ಅಗುಟ್ ಅವರು ಸ್ಪರ್ಧಿಸಲಿದ್ದಾರೆ.