×
Ad

ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ಅಲ್ಪ ಮುನ್ನಡೆ

Update: 2016-11-23 23:06 IST

ಹೊಸದಿಲ್ಲಿ, ನ.23: ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಿ.ಎಂ. ಗೌತಮ್(ಅಜೇಯ 68) ಹಾಗೂ ಆರಂಭಿಕ ಆಟಗಾರ ಆರ್. ಸಮರ್ಥ್(49) ಸಂದರ್ಭೋಚಿತ ಆಟದ ನೆರವಿನಿಂದ ಕರ್ನಾಟಕ ತಂಡ ಒಡಿಶಾ ವಿರುದ್ಧ ರಣಜಿ ಟ್ರೋಫಿಯಲ್ಲಿ ಅಲ್ಪ ಮುನ್ನಡೆಯಲ್ಲಿದೆ.

ಬುಧವಾರ 3ನೆ ದಿನದಾಟದಂತ್ಯಕ್ಕೆ ಕರ್ನಾಟಕ ಎರಡನೆ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 244 ರನ್ ಗಳಿಸಿದೆ. ಒಟ್ಟು 81 ರನ್ ಮುನ್ನಡೆಯಲ್ಲಿದೆ. ಗೌತಮ್(ಅಜೇಯ 68, 180 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಶ್ರೇಯಸ್ ಗೋಪಾಲ್(ಅಜೇಯ 11) ಕ್ರೀಸ್‌ಕಾಯ್ದುಕೊಂಡಿದ್ದಾರೆ.

ಒಡಿಶಾವನ್ನು ಮೊದಲ ಇನಿಂಗ್ಸ್‌ನಲ್ಲಿ 342 ರನ್‌ಗೆ ನಿಯಂತ್ರಿಸಿ ಎರಡನೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಮತ್ತೊಮ್ಮೆ ಕಳಪೆ ಆರಂಭ ಪಡೆಯಿತು. ಮಯಾಂಕ್ ಅಗರವಾಲ್ ಕೇವಲ 7 ರನ್‌ಗೆ ವಿಕೆಟ್ ಒಪ್ಪಿಸಿ ಕಳಪೆ ಪ್ರದರ್ಶನ ಮುಂದುವರಿಸಿದರು. 2ನೆ ವಿಕೆಟ್‌ಗೆ 56 ರನ್ ಜೊತೆಯಾಟ ನಡೆಸಿದ ಆರ್.ಸಮರ್ಥ್(49 ರನ್, 81 ಎಸೆತ, 8 ಬೌಂಡರಿ) ಹಾಗೂ ರಾಬಿನ್ ಉತ್ತಪ್ಪ(32 ರನ್, 33 ಎ, 4 ಬೌಂಡರಿ) ತಂಡವನ್ನು ಆಧರಿಸಿದರು. ಉತ್ತಪ್ಪ ವಿಕೆಟ್ ಪಡೆದ ಧೀರಜ್ ಸಿಂಗ್ ಒಡಿಶಾಕ್ಕೆ ಮೇಲುಗೈ ಒದಗಿಸಿದರು.

ಉತ್ತಪ್ಪ ಔಟಾದ ಬೆನ್ನಿಗೇ ಕೆ. ಅಬ್ಬಾಸ್(0) ವಿಕೆಟ್ ಒಪ್ಪಿಸಿದರು. ಸಿ.ಎಂ. ಗೌತಮ್ ಹಾಗೂ ನಾಯಕ ವಿನಯಕುಮಾರ್ 6ನೆ ವಿಕೆಟ್‌ಗೆ ನಿರ್ಣಾಯಕ 98 ರನ್ ಜೊತೆಯಾಟವನ್ನು ನಡೆಸಿ ತಂಡದ ಸ್ಕೋರನ್ನು 231ಕ್ಕೆ ತಲುಪಿಸಿದರು. ವಿನಯ್(41 ರನ್, 108 ಎಸೆತ, 2 ಬೌಂಡರಿ) ಸಮಂಟ್ರೆಗೆ ವಿಕೆಟ್ ಒಪ್ಪಿಸಿದರು.

ಒಡಿಶಾದ ಪರ ಧೀರಜ್ ಸಿಂಗ್(3-54) ಯಶಸ್ವಿ ಬೌಲರ್ ಎನಿಸಿಕೊಂಡರು.

 ಒಡಿಶಾ 342: ಇದಕ್ಕೆ ಮೊದಲು 9 ವಿಕೆಟ್ ನಷ್ಟಕ್ಕೆ 318 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಒಡಿಶಾ ನಿನ್ನೆಯ ಮೊತ್ತಕ್ಕೆ 24 ರನ್ ಸೇರಿಸಿ ಆಲೌಟಾಯಿತು. ಬಿಪ್ಲಬ್ ಮೊಹಾಂತಿ ನಿನ್ನೆಯ ವೈಯಕ್ತಿಕ ಸ್ಕೋರ್‌ಗೆ 34 ರನ್ ಗಳಿಸಿ ರಾಹುಲ್ ಮೋರೆಗೆ ವಿಕೆಟ್ ಒಪ್ಪಿಸಿದರು. ಮಂಗರಾಜ್ ಅಜೇಯ 10 ರನ್ ಗಳಿಸಿದರು.

ಸ್ಕೋರ್ ವಿವರ

ಕರ್ನಾಟಕ ಪ್ರಥಮ ಇನಿಂಗ್ಸ್: 179 ರನ್‌ಗೆ ಆಲೌಟ್

ಒಡಿಶಾ ಪ್ರಥಮ ಇನಿಂಗ್ಸ್: 342 ರನ್‌ಗೆ ಆಲೌಟ್

ಪಟ್ನಾಯಕ್ ಸಿ ಸಮರ್ಥ್ ಬಿ ಅರವಿಂದ್ 18

ರಂಜಿತ್ ಸಿಂಗ್ ರನೌಟ್ 06

ಗೋವಿಂದ್ ಪದ್ದಾರ್ ಸ್ಟಂ. ಗೌತಮ್ ಬಿ ಗೋಪಾಲ್ 44

ಧೀರಜ್ ಸಿಂಗ್ ಸಿ ಸಮರ್ಥ್ ಬಿ ಗೋಪಾಲ್ 08

ಸೇನಾಪತಿ ಬಿ ಗೌತಮ್ 01

ಅಭಿಷೇಕ್ ಯಾದವ್ ಸಿ ಗೌತಮ್ ಬಿ ವಿನಯ್ 33

ಸಮಂಟ್ರೆ ಸಿ ಅರವಿಂದ್ ಬಿ ಗೋಪಾಲ್ 58

ರಾವತ್ ಸಿ ಗೌತಮ್ ಬಿ ಗೋಪಾಲ್ 85

ಪ್ರಧಾನ್ ಎಲ್ಬಿಡಬ್ಲು ಗೋಪಾಲ್ 23

ಮೊಹಾಂತಿ ಬಿ ಮೋರೆ 40

ಮಂಗರಾಜ್ ಅಜೇಯ 10

ಇತರ 16

ವಿಕೆಟ್ ಪತನ: 1-23, 2-37, 3-76, 4-79, 5-79, 6-140, 7-246, 8-281, 9-292, 10-342

ಬೌಲಿಂಗ್ ವಿವರ

ವಿನಯಕುಮಾರ್ 20-3-79-1

ಎಸ್.ಅರವಿಂದ್ 22-5-41-1

ಸ್ಟುವರ್ಟ್ ಬಿನ್ನಿ 16-3-48-0

ಮೋರೆ 14.1-2-53-1

ಎಸ್.ಗೋಪಾಲ್ 27-4-75-5

ಗೌತಮ್ 18-6-30-1

ಕರ್ನಾಟಕ ದ್ವಿತೀಯ ಇನಿಂಗ್ಸ್: 81 ಓವರ್‌ಗಳಲ್ಲಿ 244/6

ಆರ್.ಸಮರ್ಥ್ ಸಿ ಪೊದ್ದಾರ್ ಬಿ ಧೀರಜ್ ಸಿಂಗ್ 49

ಅಗರವಾಲ್ ಸಿ ರಂಜಿತ್ ಬಿ ಮೊಹಾಂತಿ 07

ಉತ್ತಪ್ಪ ಎಲ್‌ಬಿಡಬ್ಲು ಬಿ ಧೀರಜ್ ಸಿಂಗ್ 32

ಕೆ.ಅಬ್ಬಾಸ್ ಸಿ ಸಬ್ ಬಿ ಧೀರಜ್ ಸಿಂಗ್ 00

ಸ್ಟುವರ್ಟ್ ಬಿನ್ನಿ ಸಿ ಪಟ್ನಾಯಕ್ ಬಿ ಪೊದ್ದಾರ್ 32

ಸಿಎಂ ಗೌತಮ್ ಅಜೇಯ 68

ವಿನಯಕುಮಾರ್ ಸಿ ಪಟ್ನಾಯಕ್ ಬಿ ಸಮಂಟ್ರೆ 41

ಎಸ್.ಗೋಪಾಲ್ ಅಜೇಯ 11

ಇತರ 04

ವಿಕೆಟ್ ಪತನ: 1-16, 2-74, 3-80, 4-108, 5-133, 6-231.

ಬೌಲಿಂಗ್ ವಿವರ:

ಪ್ರಧಾನ್ 10-2-43-0

ಮೊಹಾಂತಿ 17-6-36-1

ಮಂಗರಾಜ್ 10-2-37-0

ಸಮಂಟ್ರೆ 10-0-39-1

ಧೀರಜ್ ಸಿಂಗ್ 20-1-54-3

ಪೊದ್ದಾರ್ 14-1-34-1.

ರಣಜಿ ಟ್ರೋಫಿ: 3ನೆ ದಿನದ ಫಲಿತಾಂಶ

 ಗುವಾಹಟಿ: ಆಂಧ್ರ 226, ಕೇರಳ 219, 229/5

ಚೆನ್ನೈ: ಅಸ್ಸಾಂ 256, 115/6, ಮಹಾರಾಷ್ಟ್ರ 542

ವಲ್ಸಾಡ್: ಛತ್ತೀಸ್‌ಗಢ 188, ಹೈದರಾಬಾದ್ 351, 115/9

 ವಯನಾಡ್: ರಾಜಸ್ಥಾನ 238,221, ದಿಲ್ಲಿ 307, 51/3

 ಗಾಝಿಯಾಬಾದ್: ಹರ್ಯಾಣ 392/3, ಗೋವಾ 413

 ಹುಬ್ಬಳ್ಳಿ: ಮುಂಬೈ 328/6, ಗುಜರಾತ್ 437

ಸೂರತ್: ಹಿಮಾಚಲಪ್ರದೇಶ 296, ಸರ್ವಿಸಸ್ 401, 197/4

ಮುಂಬೈ: ತ್ರಿಪುರಾ 297 ಜಮ್ಮು-ಕಾಶ್ಮೀರ 315, 198/3

ದಿಲ್ಲಿ: ಕರ್ನಾಟಕ 179, 244/6, ಒಡಿಶಾ 342

ದಿಲ್ಲಿ: ಮ.ಪ್ರ. 356/5, ರೈಲ್ವೇಸ್ 371

ನಾಗ್ಪುರ: ತಮಿಳುನಾಡು 354, ಪಂಜಾಬ್ 284, 121/2

ದಿಲ್ಲಿ: ಸೌರಾಷ್ಟ್ರ 301,92/2, ವಿದರ್ಭ 347.

ಶ್ರೇಯಸ್ ಶತಕ, ಅಂಕದ ನಿರೀಕ್ಷೆಯಲ್ಲಿ ಮುಂಬೈ

ಹುಬ್ಬಳ್ಳಿ, ನ.23: ಈ ಋತುವಿನಲ್ಲಿ ಶ್ರೇಯಸ್ ಅಯ್ಯರ್ ಬಾರಿಸಿದ ಮೊದಲ ಶತಕದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ತಂಡ ಗುಜರಾತ್ ವಿರುದ್ಧದ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಅಂಕ ಗಳಿಸುವತ್ತ ಚಿತ್ತವಿರಿಸಿದೆ.

 ಇಲ್ಲಿನ ಕೆಎಸ್‌ಸಿಎ ರಾಜ್‌ನಗರ್ ಸ್ಟೇಡಿಯಂನಲ್ಲಿ ಶ್ರೇಯಸ್ ಅಜೇಯ 191 ರನ್ ಗಳಿಸಿದ್ದು, ಮುಂಬೈ ಬುಧವಾರ ಮೂರನೆ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 328 ರನ್ ಗಳಿಸಿದೆ. ಗುಜರಾತ್‌ನ ಮೊದಲ ಇನಿಂಗ್ಸ್‌ಗಿಂತ 109 ರನ್ ಹಿನ್ನಡೆಯಲ್ಲಿದೆ.

 ಮಂಗಳವಾರ ಗುಜರಾತ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 437 ರನ್‌ಗೆ ಆಲೌಟ್ ಮಾಡಿರುವ ಮುಂಬೈ ಇಂದು 3 ವಿಕೆಟ್‌ಗಳ ನಷ್ಟಕ್ಕೆ 58 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು.

ನಾಲ್ಕನೆ ವಿಕೆಟ್‌ಗೆ 187 ರನ್ ಜೊತೆಯಾಟ ನಡೆಸಿದ ಶ್ರೇಯಸ್ ಹಾಗೂ ನೈಟ್‌ವಾಚ್‌ಮನ್ ಧವಳ್ ಕುಲಕರ್ಣಿ ಗುಜರಾತ್ ಬೌಲರ್‌ಗಳ ಬೆವರಿಳಿಸಿದರು. 62.4 ಓವರ್‌ಗಳ ಕಾಲ ಕ್ರೀಸ್‌ನಲ್ಲಿದ್ದ ಈ ಜೋಡಿಯನ್ನು ಜಸ್‌ಪ್ರಿತ್ ಬುಮ್ರಾ ಬೇರ್ಪಡಿಸಿದರು.

ಗಾಯಗೊಂಡಿರುವ ವೃದ್ದಿಮಾನ್ ಸಹಾ ಬದಲಿಗೆ ಭಾರತೀಯ ಟೆಸ್ಟ್ ತಂಡವನ್ನು ಸೇರ್ಪಡೆಯಾಗಲು ಪಾರ್ಥಿವ್ ಪಟೇಲ್ ತೆರಳಿರುವ ಹಿನ್ನೆಲೆಯಲ್ಲಿ ಗುಜರಾತ್ ತಂಡವನ್ನು ಆಲ್‌ರೌಂಡರ್ ಅಕ್ಷರ್ ಪಟೇಲ್ ಮುನ್ನಡೆಸಿದರು.

ದಿನದಾಟ ಕೊನೆಗೊಳ್ಳಲು ಕೆಲವೇ ನಿಮಿಷ ಬಾಕಿಯಿರುವಾಗ ಅಭಿಷೇಕ್ ನಾಯರ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದ ಬುಮ್ರಾ 49ರನ್‌ಗೆ ಒಟ್ಟು 4 ವಿಕೆಟ್ ಕಬಳಿಸಿದರು.

ನಾಗ್ಪುರದಲ್ಲಿ ನಡೆದ ರಣಜಿಯಲ್ಲಿ ಕೌಶಿಕ್ ಗಾಂಧಿ ಬಾರಿಸಿದ ಜೀವನಶ್ರೇಷ್ಠ 164 ರನ್ ಗಳಿಸಿ ತಮಿಳುನಾಡು ತಂಡ ಪಂಜಾಬ್‌ನ ವಿರುದ್ಧ 70 ರನ್ ಮುನ್ನಡೆ ಪಡೆಯಲು ನೆರವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News