×
Ad

ಮೇರಿಕೋಮ್‌ಗೆ ಎಐಬಿಎ ‘ಲೆಜೆಂಡ್ಸ್ ಅವಾರ್ಡ್’

Update: 2016-11-25 23:18 IST

ಹೊಸದಿಲ್ಲಿ, ನ.25: ಭಾರತದ ಖ್ಯಾತ ಬಾಕ್ಸರ್ ಮೇರಿ ಕೋಮ್‌ರ ಸಾಹಸಮಯ ವೃತ್ತಿಬದುಕಿಗೆ ಮತ್ತೊಂದು ಗೌರವ ಪ್ರಾಪ್ತವಾಗಿದೆ. ಮೇರಿಕೋಮ್ ಡಿ.20 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ(ಎಐಬಿಎ) 70ನೆ ವಾರ್ಷಿಕೋತ್ಸವದಲ್ಲಿ ‘ಲೆಜೆಂಡ್ಸ್ ಅವಾರ್ಡ್’ನ್ನು ಸ್ವೀಕರಿಸಲಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಹಾಗೂ ಐದು ಬಾರಿ ವಿಶ್ವ ಚಾಂಪಿಯನ್ ಕೂಡ ಆಗಿರುವ ಮೇರಿಕೋಮ್ ಪ್ರಸ್ತುತ ರಾಜ್ಯಸಭಾ ಸದಸ್ಯೆಯಾಗಿದ್ದಾರೆ.

 ‘‘ಈ ಪ್ರತಿಷ್ಠಿತ ಪ್ರಶಸ್ತಿಗೆ ನನ್ನನ್ನು ಪರಿಗಣಿಸಿರುವ ಎಐಬಿಎ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ನಾನು ಕೃತಜ್ಞತೆ ಸಲ್ಲಿಸಲು ಬಯಸುವೆ. ಎಐಬಿಎಯಿಂದ ನನಗೆ ಲಭಿಸಿದ ಈ ಗೌರವ ದೇಶದ ಯುವ ಬಾಕ್ಸರ್‌ಗಳು ಕಠಿಣ ಪರಿಶ್ರಮಪಡಲು ಉತ್ತೇಜನ ನೀಡಿದೆ. ಈ ದಿನ ನನಗೆ ಭಾವನಾತ್ಮಕ ಹಾಗೂ ಪ್ರೋತ್ಸಾಹದಾಯಕವಾಗಿದೆ. ಇಷ್ಟೊಂದು ವರ್ಷದ ಬಳಿಕವೂ ಜನರು ನನ್ನ ಸಾಧನೆಯನ್ನು ಗುರುತಿಸುತ್ತಾರೆಂದರೆ ಅದು ಅವರು ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ’’ ಎಂದು ಮೇರಿಕೋಮ್ ಪ್ರತಿಕ್ರಿಯಿಸಿದರು.

ಎಐಬಿಎ ಡಿ.20ರಂದು 70ನೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದೆ. ಈ ಸಂದರ್ಭದಲ್ಲಿ ಮೇರಿಕೋಮ್‌ಗೆ ಪ್ರಶಸ್ತಿ ನೀಡಲಾಗುತ್ತದೆ.

ಈ ವರ್ಷಾರಂಭದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನ ವೇಳೆ ಎಐಬಿಎ ಸದ್ಬಾವನಾ ರಾಯಭಾರಿಯಾಗಿ ನೇಮಕಗೊಂಡಿದ್ದ್ದ ಮೇರಿಕೋಮ್ ಹಲವು ಬಾರಿ ಏಷ್ಯನ್ ಚಾಂಪಿಯನ್ ಪ್ರಶಸ್ತಿಯನ್ನು ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News