ಆಟಗಾರರಿಗೆ ಕ್ಯಾಶ್ ಕಾರ್ಡ್ ವಿತರಿಸಲು ಬಿಸಿಸಿಐ ಚಿಂತನೆ
Update: 2016-11-25 23:25 IST
ಮುಂಬೈ, ನ.25: ಸಮಯಕ್ಕೆ ತಕ್ಕಂತೆ ಬದಲಾಗಲು ನಿರ್ಧರಿಸಿರುವ ಬಿಸಿಸಿಐ ಕೆಲವೇ ಅಧಿಕಾರಿಗಳಿಗೆ ಸೀಮಿತವಾಗಿದ್ದ ಕ್ಯಾಶ್ ಕಾರ್ಡ್‌ಗಳನ್ನು ರಾಷ್ಟ್ರೀಯ ತಂಡದ ಎಲ್ಲ ಆಟಗಾರರಿಗೂ ವಿತರಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ.
‘‘ಮುಖ್ಯವಾಗಿ ನಮ್ಮ ತಂಡಕ್ಕೆ ಕ್ಯಾಶ್ ಕಾರ್ಡ್‌ನ್ನು ವಿತರಿಸಲು ನಿರ್ಧರಿಸಿದ್ದೇವೆ. ಆಟಗಾರರು ಹಾಗೂ ಅಧಿಕಾರಿಗಳಿಗೆ ಕ್ಯಾಶ್ ಕಾರ್ಡ್ ವಿತರಿಸಲು ಬಯಸಿದ್ದೇವೆ. ಈಗಾಗಲೇ ಇಂತಹ ಕಾರ್ಡ್‌ಗಳನ್ನು ನಿರ್ದಿಷ್ಟ ಅಧಿಕಾರಿಗಳಿಗೆ ನೀಡುತ್ತಿದ್ದೇವೆ. ಅದನ್ನು ಎಲ್ಲರಿಗೂ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕ್ಯಾಶ್ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ಪ್ರಿ-ಪೇಯ್ಡಿ ರೂಪದಲ್ಲಿ ನೀಡುತ್ತವೆ. ವ್ಯಕ್ತಿಯೊಬ್ಬ ತನ್ನಲ್ಲಿ ಖಾತೆಯಿಲ್ಲದಿದ್ದರೂ ಈ ಕಾರ್ಡ್‌ನ್ನು ಬಳಸಬಹುದಾಗಿದೆ.