ಎರಡನೆ ಟೆಸ್ಟ್: ನ್ಯೂಝಿಲೆಂಡ್ 77/2

Update: 2016-11-25 18:00 GMT

ಹ್ಯಾಮಿಲ್ಟನ್, ನ.25: ಆತಿಥೇಯ ನ್ಯೂಝಿಲೆಂಡ್ ಹಾಗೂ ಪ್ರವಾಸಿ ಪಾಕಿಸ್ತಾನ ತಂಡಗಳ ನಡುವೆ ಶುಕ್ರವಾರ ಇಲ್ಲಿ ಆರಂಭವಾದ ಎರಡನೆ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

 ಟಾಸ್ ಜಯಿಸಿದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಪದೇ ಪದೇ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ನ್ಯೂಝಿಲೆಂಡ್ ಮೊದಲ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿತು. ಆರಂಭಿಕ ಆಟಗಾರ ಜೀತ್ ರಾವಲ್(ಅಜೇಯ 35) ಹಾಗೂ ರಾಸ್ ಟೇಲರ್(29) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಪಾಕಿಸ್ತಾನದ ಪರ ಮುಹಮ್ಮದ್ ಆಮಿರ್(1-15) ಹಾಗೂ ಸೊಹೈಲ್ ಖಾನ್(1-35) ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News