ನೋಟು ರದ್ದತಿ ಬಗ್ಗೆ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದ್ದೇನು ?

Update: 2016-11-26 06:45 GMT

ಹೊಸದಿಲ್ಲಿ, ನ. 26:ಭಾರತ ರತ್ನ ಮತ್ತು ನೊಬೆಲ್ ಪ್ರಶಸ್ತಿ ಪರಸ್ಕೃತ ಅಮರ್ತ್ಯಸೇನ್‌ರು, ಮೋದಿ ಸರಕಾರದ 500,1000ರೂಪಾಯಿ ನೋಟು ಅಮಾನ್ಯಗೊಳಿಸಿದ ಕ್ರಮ ನಿರಂಕುಶ ವರ್ತನೆಯಾಗಿದೆ ಎಂದು ಹೇಳಿದ್ದಾರೆಂದು ವರದಿಯಾಗಿದೆ. ಡಿಮೊನೆಟೈಝೇಶನ್ ಎಂಬುದು ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತಿದೆ ಎಂದು ಅವರು ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತಾಡುತ್ತಾ ಹೇಳಿದ್ದಾರೆ.

" ಜನರಿಗೆ ಅನೀರೀಕ್ಷಿತವಾಗಿ ನಿಮ್ಮ ಬಳಿಯಿರುವ ನೋಟು ಯಾವುದೇ ಪ್ರಯೋಜನ ಇಲ್ಲ. ಅದನ್ನು ನೀವು ಬಳಸುವಂತಿಲ್ಲ ಎಂದು ಹೇಳುವುದು ಸವಾರ್ಧಿಕಾರಿವಾದದ ಒಂದು ಜಟಿಲ ಅಭಿವ್ಯಕ್ತಿಯಾಗಿದೆ. ಇದನ್ನೆ ಸರಕಾರ ಸರಿಯಾದ ಕ್ರಮ ಎಂದು ಬಿಂಬಿಸುತ್ತಿದೆ. ಯಾಕೆಂದರೆ ಕೆಲವರ ಮೂಲಕ ಕಪ್ಪುಹಣದ ರೂಪದಲ್ಲಿ ಜಮಾವಣೆಯಾಗಿದೆ ಎಂಬುದು ಕಾರಣವಾಗಿದೆ" ಎಂದು ಸೇನ್ ಹೇಳಿದ್ದಾರೆ. " ಆದರೆ ಸರಕಾರದ ಈ ಘೋಷಣೆ ಒಂದೇಟಿಗೆ ಎಲ್ಲಭಾರತೀಯರನ್ನು ತಪ್ಪಿತಸ್ಥರು ಎಂದು ಬಿಂಬಿಸುತ್ತಿದೆ. ಇದು ಸತ್ಯಕ್ಕೆ ದೂರ ವಿಚಾರವಾಗಿದೆ"

ಹಳೆ ನೋಟು ನಿಷೇಧದಿಂದ ಜನಸಾಮಾನ್ಯರಿಗೆ ಆಗುತ್ತಿರುವ ಸಂಕಷ್ಟಗಳ ಕುರಿತು ಪ್ರತಿಕ್ರಿಯಿಸಿದ ಅವರು" ಕೇವಲ ಒಂದು ಸರ್ವಾಧಿಕಾರಿ ಸರಕಾರ ಸದ್ದಿಲ್ಲದೆ ಇಂತಹ ಸಂಕಷ್ಟಕ್ಕೆ ಹಾಕಬಲ್ಲುದು. ಇಂದು ಲಕ್ಷಾಂತರ ಅಮಾಯಕ ಜನರು ತಮ್ಮ ಹಣದಿಂದಲೇ ವಂಚಿತರಾಗಿದ್ದಾರೆ.ತಮ್ಮ ಸ್ವಂತ ಹಣವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಅವರು ಅವ್ಯವ್ಯಸ್ಥ ಕಿರುಕುಳ ಮತ್ತು ಅಪಮಾನವನ್ನು ಅನುಭವಿಸುವಂತಾಗಿದೆ" ಎಂದು ಹೇಳಿದ್ದಾರೆ.

ಪ್ರಧಾನಿ ಹೇಳುವಂತೆನೋಟು ನಿಷೇಧದಲ್ಲಿ ಸಕಾರಾತ್ಮಕ ಪ್ರಭಾವಗಳಿಲ್ಲವೇ ಎಂದು ಸೇನ್‌ರನ್ನು ಪ್ರಶ್ನಿಸಿದಾಗ’ ಇದು ಕಷ್ಟ ಎಂದು ಅನಿಸುತ್ತದೆ. ಇದು ಕಪ್ಪುಹಣ ತಂದು ಭಾರತೀಯರಿಗೆ ಗಿಫ್ಟ್ ಕೊಡುತ್ತೇವೆ ಎಂದು ಹೇಳಿದಂತೆ ಬೋಗಸ್ ಭರವಸೆ ಆಗುವ ಸಾಧ್ಯತೆಯೇ ಹೆಚ್ಚಿದೆ" ಎಂದು ಹೇಳಿದ್ದಾರೆ.

’ಕಪ್ಪಹಣ ಇರುವವರಿಗೆ ನೋಟು ನಿಷೇಧದಿಂದ ಅಂತಹ ಹಾನಿಯೇನುಆಗುವುದಿಲ್ಲ. ಬದಲಾಗಿ ಸಾಮಾನ್ಯ ಅಮಾಯಕ ಜನರು ಇದರಿಂದ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಮೋದಿಯ ಈ ಕ್ರಮದಿಂದ ಸಾಮಾನ್ಯ ಜನರು ಮತ್ತು ಸಣ್ಣ ವ್ಯವಹಾರಸ್ಥರು ಬೀದಿಗೆ ಬರುವಂತಾಗಿದೆ" ಎಂದು ಅಮರ್ತ್ಯ ಸೇನ್ ಹೇಳಿದ್ದಾರೆ.

 ಸರಕಾರ ಪ್ರತಿಪಾದನೆಯಾದ ನೋಟು ನಿಷೇಧ ಕ್ರಮವನ್ನು ನೋವಿನ ಬಳಿಕದ ಆರಾಮ ಎಂಬ ಹೇಳಿಕೆಯನ್ನು ಅವರು ಖಂಡಿಸಿದ್ದು," ಒಳ್ಳೆಯ ನೀತಿ ಕೆಲವೊಮ್ಮೆ ನೋವಿಗೆ ಕಾರಣವಾಗುವುದಿದೆ. ಆದರೆ ನೋವಿಗೆ ಕಾರಣವಾಗುವ ಎಲ್ಲವೂ ಅದೆಷ್ಟೇ ತೀವ್ರವಾದ ನೋವು ನೀಡುವುದಾಗಿದ್ದರೂ ಅವೆಲ್ಲವೂ ಒಳ್ಳೆಯ ನೀತಿಯೇ ಆಗಿರಬೇಕೆಂದೇನಿಲ್ಲ" ಎಂದು ಹೇಳಿದ್ದಾರೆ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News