ಪ್ರತೀಕಾರ ತೀರಿಸುವೆವು: ತಿರುವನಂತಪುರಂನಲ್ಲಿ ಮಾವೊವಾದಿ ಪೋಸ್ಟರ್
Update: 2016-11-27 14:50 IST
ತಿರುವನಂತಪುರಂ, ನ. 27: ತಿರುವನಂತಪುರಂನಲ್ಲಿ ಮಾವೊವಾದಿಗಳನ್ನು ಬೆಂಬಲಿಸಿದ ಪೋಸ್ಟರ್ ಕಂಡು ಬಂದಿದೆ ಎಂದು ವರದಿಯಾಗಿದೆ. ಸ್ಪೆನ್ಸರ್ ಜಂಕ್ಷನ್‌ನ ಇಂಡಿಯನ್ ಕಾಫಿ ಹೌಸ್‌ನ ಪುರುಷರ ಶೌಚಾಯಲದ ಗೋಡೆಯಲ್ಲಿ ಪೋಸ್ಟರ್ ಕಂಡುಬಂದಿದೆ.
ಮಾವೊವಾದಿಗಳ ವಿರುದ್ಧ ನಡೆಸಲಾದ ಭಯೋತ್ಪಾದನೆಗೆ ತಕ್ಕಪ್ರತೀಕಾರ ನಡೆಸಲಾಗುವುದು ಎಂದು ಕೆಂಪು ಶಾಯಿಯಲ್ಲಿ ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಪರಿಶೀಲನೆ ನಡೆಸಿದ ಬಳಿಕ ಪೊಲೀಸರು ಪೋಸ್ಟರ್‌ನ್ನು ತೆರವುಗೊಳಿಸಿದ್ದಾರೆ. ಪೋಸ್ಟರ್‌ನ ಅಧಿಕೃತತೆ ಬಗ್ಗೆದೃಢೀಕರಣಗೊಂಡಿಲ್ಲ. ನಿಲಂಬೂರ್‌ನಲ್ಲಿಇಬ್ಬರು ಮಾವೊವಾದಿಗಳು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತರಾದ ಹಿನ್ನೆಲೆಯಲ್ಲಿ ಪೋಸ್ಟರ್ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.