ಪಾಕಿಸ್ತಾನ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ
ಕರಾಚಿ, ನ.28: ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡ ಬದಲಾವಣೆಯಿಲ್ಲದ 16 ಸದಸ್ಯರ ತಂಡವನ್ನು ಪ್ರಕಟಿಸಿದೆ.
ನ್ಯೂಝಿಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಅಂತಿಮ 11ರ ಬಳಗಕ್ಕೆ ಸೇರ್ಪಡೆಯಾಗದ ಆರಂಭಿಕ ದಾಂಡಿಗ ಶಾರ್ಜೀಲ್ ಖಾನ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಆಯ್ಕೆಗೆ ಪರಿಗಣಿಸಲ್ಪಟ್ಟಿದ್ದ ಮುಹಮ್ಮದ್ ಹಫೀಝ್ ಆಸ್ಟ್ರೇಲಿಯ ವಿರುದ್ಧ ಸರಣಿಗೆ ಆಯ್ಕೆಯಾಗಿಲ್ಲ. ಈ ತಿಂಗಳಾರಂಭದಲ್ಲಿ ಬ್ರಿಸ್ಬೇನ್‌ನಲ್ಲಿ ಐಸಿಸಿಯಿಂದ ಬೌಲಿಂಗ್ ಪರೀಕ್ಷೆಗೆ ಒಳಗಾಗಿರುವ ಹಫೀಝ್ ವರದಿಯ ನಿರೀಕ್ಷೆಯಲ್ಲಿದ್ದಾರೆ.
ವೈಯಕ್ತಿಕ ಕಾರಣದಿಂದ ನ್ಯೂಝಿಲೆಂಡ್ ವಿರುದ್ಧದ ಎರಡನೆ ಟೆಸ್ಟ್‌ನಿಂದ ಹೊರಗುಳಿದಿದ್ದ ಖಾಯಂ ನಾಯಕ ಮಿಸ್ಬಾವುಲ್ ಹಕ್ ತಂಡಕ್ಕೆ ವಾಪಸಾಗಿದ್ದಾರೆ. ಬ್ರಿಸ್ಬೇನ್‌ನಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡುವ ಮೂಲಕ ಆಸ್ಟ್ರೇಲಿಯ ಪ್ರವಾಸ ಆರಂಭಿಸಲಿರುವ ಪಾಕಿಸ್ತಾನಕ್ಕೆ ಮಿಸ್ಬಾವುಲ್‌ಹಕ್ ಅನುಭವದ ಅಗತ್ಯವಿದೆ. ಪಾಕಿಸ್ತಾನ ತಂಡ ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ಉಳಿದೆರಡು ಪಂದ್ಯಗಳನ್ನು ಆಡಲಿದೆ.
ಪಾಕಿಸ್ತಾನ ಟೆಸ್ಟ್ ತಂಡ:
ಅಝರ್ ಅಲಿ, ಸಮಿ ಅಸ್ಲಾಂ, ಶಾರ್ಜೀಲ್ ಖಾನ್, ಅಸದ್ ಶಫೀಖ್, ಯೂನಿಸ್ ಖಾನ್, ಮಿಸ್ಬಾವುಲ್ ಹಕ್(ನಾಯಕ), ಬಾಬರ್ ಆಝಂ, ಸರ್ಫಾಝ್ ಅಹ್ಮದ್, ಮುಹಮ್ಮದ್ ರಿಝ್ವಾನ್, ಮುಹಮ್ಮದ್ ನವಾಝ್, ಯಾಸಿರ್ ಷಾ, ಮುಹಮ್ಮದ್ ಆಮಿರ್, ವಹಾಬ್ ರಿಯಾಝ್, ಸೊಹೈಲ್ ಖಾನ್, ರಾಹತ್ ಅಲಿ, ಇಮ್ರಾನ್ ಖಾನ್.