×
Ad

ಕಳ್ಳರಿಂದ 2 ಕೋಟಿ ನುಂಗಿ ಪರಾರಿಯಾಗಲು ಬಿಟ್ಟ ಪೊಲೀಸರು!

Update: 2016-11-30 14:03 IST

ಹೊಸದಿಲ್ಲಿ, ನ.30: ಕಳ್ಳರ ಗ್ಯಾಂಗ್ ಒಂದನ್ನು ಪತ್ತೆ ಹಚ್ಚಲು ಯಶಸ್ವಿಯಾಧ ಇಬ್ಬರು ಪೊಲೀಸ್ ಅಧಿಕಾರಿಗಳು ನಂತರ ಅವರಿಂದ 2.3 ಕೋಟಿ ರೂ. ಲಂಚ ಪಡೆದು ಅವರನ್ನು ಪರಾರಿಯಾಗಲು ಬಿಟ್ಟ ಸ್ವಾರಸ್ಯಕರ ಘಟನೆ ಸುಮಾರು 3 ವರ್ಷಗಳ ಹಿಂದೆ ನಡೆದಿದ್ದರೂ, ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಈ ಇಬ್ಬರು ಪೊಲೀಸ್ ಅಧಿಕಾರಿಗಳು ಇದೀಗ ತನಿಖೆ ಎದುರಿಸುತ್ತಿದ್ದಾರೆ.

ಕಳ್ಳರ ಗ್ಯಾಂಗ್ ಒಂು ಸತ್ತಾ ಆಪರೇಟರ್ ಒಬ್ಬರಿಂದ 2013ರಲ್ಲಿ 7.5 ಕೋ.ರೂ. ಲೂಟಿ ತ್ತು. ಆದರೆ ಸಂತ್ರಸ್ತ ತನ್ನ ವಿರುದ್ಧ ಕಾಳಧನ ಪ್ರಕರಣ ದಾಖಲಾಗುವುದೆಂಬ ಭಯದಿಂದ ಪೊಲೀಸ್ ದೂರು ದಾಖಲಿಸಿರಲಿಲ್ಲ. ಆದರೆ ಎಸಿಪಿ ಹಾಗೂ ಇನಸ್ಪೆಕ್ಟರ್ ಒಬ್ಬರಿಗೆ ಈ ಘಟನೆಯ ಬಗ್ಗೆ ಮಾಹಿತಿಯಿದ್ದ ಕಾರಣ ಅವರು ಕಳ್ಳರನ್ನು ಹಿಡಿದು ಬಿಟ್ಟಿದ್ದರು. ಸಂತ್ರಸ್ತನ ಲೂಟಿಗೈದವರನ್ನು ಗುರುತಿಸಿದ್ದರೂ, ಲೂಟಿಗೈದ ಹಣದಲ್ಲಿ ಪಾಲು ಪಡೆದ ಪೊಲೀಸ್ ಅಧಿಕಾರಿಗಳು ಅವರನ್ನು ಹೋಗಲು ಬಿಟ್ಟಿದ್ದರು.
ಸುಮಾರು ಒಂದು ತಿಂಗಳ ಹಿಂದೆ ಛತ್ತರಪುರದಲ್ಲಿ ನಡೆದ ಕಳ್ಳತನ ಪ್ರಕರಣದ ತನಿಖೆಯ ಸಂದರ್ಭ ಈ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ.

ಛತ್ತರಪುರ ಕಳ್ಳತನ ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ 2013ರಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಗಳ ಸ್ನೇಹಿತನೊಬ್ಬನ ಭೇಟಿಯಾಗಿತ್ತು. ಆತ ಕೂಡ 2013ರ ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದನೆನ್ನಲಾಗಿದ್ದು ತಮ್ಮಿಂದ ಲಂಚ ಪಡೆದ ಪೊಲೀಸರನ್ನು ತನ್ನ ಮುಂದೆ ಹಾಜರುಪಡಿಸಿದರೆ ಗುರುತಿಸುವುದಾಗಿ ಹೇಳಿದ್ದ. ಅಂತೆಯೇ ಇಬ್ಬರು ಪೊಲೀಸರ ಗುಟ್ಟುರಟ್ಟಾಗಿದ್ದು ಅವರೀಗ ತನಿಖೆ ಎದುರಿಸುತ್ತಿದ್ದಾರೆ. ಈ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News