×
Ad

ಸೇನಾ ಹೆಲಿಕಾಪ್ಟರ್‌ ಪತನ; ನಾಲ್ವರ ಸಾವು

Update: 2016-11-30 14:30 IST

ಕೋಲ್ಕತಾ, ನ.30: ಪಶ್ಚಿಮ ಬಂಗಾಳದ ಸುಖಾನದ ಬಳಿ ಸೇನಾ ಹೆಲಿಕಾಪ್ಟರ್‌  'ಚೀತಾ’ ಪತನಗೊಂಡ ಪರಿಣಾಮವಾಗಿ ಮೂವರು ಸೇನಾಧಿಕಾರಿಗಳು ಮತ್ತು ಪೈಲೆಟ್‌ ಮೃತಪಟ್ಟಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ.
ಬುಧವಾರ ಬೆಳಗ್ಗೆ 10:30ಕ್ಕೆ ಹೊರಟಿದ್ದ ಹೆಲಿಕಾಪ್ಟರ‍್ ಪತನಗೊಂಡಿದ್ದು, ಹೆಲಿಕಾಪ್ಟರ್‌ನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಈ ಪೈಕಿ ಪೈಲೆಟ್‌ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಓರ್ವ ಅಧಿಕಾರಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News