ಬಿಹಾರದ ಬಳಿಕ ಇನ್ನೊಂದು ರಾಜ್ಯದಲ್ಲೂ ಬಿಜೆಪಿ ಭೂಮಿ ಖರೀದಿ ಬಯಲಿಗೆ !
ಹೊಸದಿಲ್ಲಿ,ನ.30 : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನೋಟು ಅಮಾನ್ಯ ನಿರ್ಧಾರವನ್ನು ನವೆಂಬರ್ 8ರ ರಾತ್ರಿ ಘೋಷಿಸುವಮೊದಲೇರಾಜಸ್ಥಾನ ಕೋಟಾದಲ್ಲಿ ಬಿಜೆಪಿ ಹಲವಾರು ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಪಕ್ಷದ ಕಚೇರಿಗಳನ್ನು ನಿರ್ಮಿಸುವ ಉದ್ದೇಶದಿಂದ ಖರೀದಿಸಿತ್ತೆಂದು ತಿಳಿದು ಬಂದಿದೆ. ಆದರೆ ಭೂಮಿಯ ರಿಜಿಸ್ಟ್ರೇಶನ್ ಕಾರ್ಯ ನೋಟು ರದ್ದತಿಯ ಕಾರಣದಿಂದ ತಡೆಹಿಡಿಯಬೇಕಾಗಿ ಬಂದಿತ್ತು.
ಪಕ್ಷವು ತನ್ನ ಕಚೇರಿಗಳನ್ನು ಬಾಡಿಗೆ ಕಟ್ಟಡಗಳಲ್ಲಿ ನಡೆಸುವೆಡೆಗಳಲ್ಲೆಲ್ಲಾ ಸ್ವಂತ ಕಟ್ಟಡದಲ್ಲಿ ಕಚೇರಿಪ್ರಾರಂಭಿಸುವ ಸಲುವಾಗಿ ಎಲ್ಲಾ ವಿಭಾಗೀಯ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳಿಗೆ ಪಕ್ಷ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ದೇಶನದನ್ವಯ ಈ ಭೂಮಿಯನ್ನುಖರೀದಿಸುವ ಪ್ರಕ್ರಿಯೆಗೆ ಕೈ ಹಾಕಲಾಗಿತ್ತೆನ್ನಲಾಗಿದೆ.
ರಾಜಕೀಯ ಪಕ್ಷಗಳಿಗೆ ಭೂಮಿ ಮಂಜೂರುಗೊಳಿಸುವ ನಿಟ್ಟಿನಲ್ಲಿ ರಾಜಸ್ಥಾನದಲ್ಲಿ ಯಾವುದೇ ನೀತಿ ನಿಯಮಗಳಿಲ್ಲದೇ ಇದ್ದರೂ ಐದು ತಿಂಗಳುಗಳ ಹಿಂದೆ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರದಂತೆ ಪಕ್ಷಗಳ ವಿಭಾಗೀಯ ಹಾಗೂ ಜಿಲ್ಲಾ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲದೇ ಹೋದಲ್ಲಿ ಅವುಗಳಿಗೆ ಭೂಮಿ ಮಂಜೂರು ಮಾಡಬಹುದೆಂದು ಹೇಳಿತ್ತು.
ಇದರನ್ವಯ ರಾಜ್ಯದ ಅರ್ಬನ್ ಇಂಪ್ರೂವ್ ಮೆಂಟ್ ಟ್ರಸ್ಟ್80 ಫೀಟ್ ಲಿಂಕ್ ರೋಡ್ ಸಮೀಪವಿರುವ ಬಸ್ಸು ನಿಲ್ದಾಣದ ಸಮೀಪದ ರೂ. 2 ಕೋಟಿ ಬೆಲೆಬಾಳುವ 3,000 ಚದರ ಮೀಟರ್ ಭೂಮಿಯನ್ನು ಬಿಜೆಪಿಗೆ ನಾಲ್ಕು ತಿಂಗಳುಗಳ ಹಿಂದೆ ಮಂಜೂರುಗೊಳಿಸಿತ್ತು. ಈ ಭೂಮಿ ಖರೀದಿಸಲು ಹಣ ಪಕ್ಷದ ರಾಷ್ಟ್ರೀಯ ಕಚೇರಿಯಿಂದದೊರಕಿತ್ತೆನ್ನಲಾಗಿದೆ. ಈ ಮೊತ್ತದ ಡಿಮಾಂಡ್ ಡ್ರಾಫ್ಟ್ಆಗಸ್ಟ್ ತಿಂಗಳಲ್ಲಿಟ್ರಸ್ಟಿಗೆ ಸಲ್ಲಿಕೆಯಾಗಿತ್ತು.
ಈ ಭೂಮಿ ರಿಜಿಸ್ಟ್ರೇಶನ್ ಮೊತ್ತವನ್ನು ಪಕ್ಷದ ಸ್ಥಳೀಯ ಕಾರ್ಯಕಾರಿ ಮಂಡಳಿಭರಿಸಿತ್ತು. ಆದರೆ ನೋಟು ರದ್ದತಿಯಿಂದಾಗಿ ರಿಜಿಸ್ಟ್ರೇಶನ್ ಆಗಿಲ್ಲ.
ಈ ಭೂ ಖರೀದಿ ಬಗ್ಗೆ ತನಿಖೆ ನಡೆಸುವಂತೆ ಕೋಟಾ ಕಾಂಗ್ರೆಸ್ಸಿನ ಮಾಜಿ ಪ್ರಧಾನ ಕಾರ್ಯದರ್ಶಿ ಹುಕಮ್ ಕಾಕಾ ಆಗ್ರಹಿಸಿದ್ದಾರೆ.