ಬಿಗ್‌ಬಝಾರ್‌ನ ಬಿಗ್ ಬಾಸ್ ನಮ್ಮ ಪ್ರಧಾನಿಯಾಗಿದ್ದಾರೆ: ಮಮತಾ

Update: 2016-12-01 12:55 GMT

ಪಾಟ್ನ, ಡಿಸೆಂಬರ್1: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಹಾರದ ರಾಜಧಾನಿ ಪಾಟ್ನದಲ್ಲಿ ನೋಟು ಅಮಾನ್ಯಗೊಳಿಸಿದ ಕ್ರಮವನ್ನು ವಿರೋಧಿಸಿ ಆಯೋಸಿದ್ದ ಧರಣಿಯಲ್ಲಿ ಪ್ರಧಾನಿ ನರೇಂದ್ರಮೋದಿಯ ವಿರುದ್ಧ ಕಟು ಟೀಕಾ ಪ್ರಹಾರ ಹರಿಸಿದ್ದಾರೆಂದು ವರದಿಯಾಗಿದೆ.

ಧರಣಿಯನ್ನು ಉದ್ದೇಶಿಸಿ ಮಾತಾಡಿದ ಮಮತಾ, ಮೋದಿಯನ್ನು" ಬಿಗ್ ಬಝಾರ್‌ನ ಬಿಗ್ ಬಾಸ್ ಇಂದು ದೇಶದ ಪ್ರಧಾನಿ ಆಗಿದ್ದಾರೆ" ಎಂದು ಗುಡುಗಿದ್ದಾರೆ. ಇಂದಿನ ಮಕ್ಕಳು ಪೆಟಿಎಂ, ಪೆಪಿಎಂ ಎಂದು ಬದಲಿಸಿ ಹೇಳತೊಡಗಿದ್ದಾರೆ. 190ವರ್ಷದ ಹೋರಾಟಗಳ ಬಳಿಕ ಭಾರತ ಸ್ವತಂತ್ರವಾಯಿತು.

ಪಿಎಂ ಮೋದಿ ಮತ್ತೆ ಎಲ್ಲರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ. ಮೋದಿ ಎಲ್ಲರ ರೋಟಿ,ಕಪಡಾ, ಮಕಾನ್(ರೊಟ್ಟಿ, ಬಟ್ಟೆ, ಮನೆ) ಕಿತ್ತುಕೊಂಡಿದ್ದಾರೆ. ದೇಶದಲ್ಲಿ ಸೂಪರ್ ಎಮರ್ಜೆನ್ಸಿ ಹೇರಿದ್ದಾರೆಂದು ಮಮತಾ ಹೇಳಿದ್ದಾರೆ.

ಕಷ್ಟದ ಸಮಯದಲ್ಲಿ ಮನೆಯ ಮಹಿಳೆಯರು ತೆಗೆದಿಟ್ಟ ಹಣವನ್ನು ಕೊಡುತ್ತಾರೆ. ಮೋದಿ ಸಾಬ್ ಅದನ್ನು ಪಡೆದುಕೊಂಡರು. ಇದು ಸ್ತ್ರೀ ಧನ ಮತ್ತು ಸ್ತ್ರೀ ಶಕ್ತಿಯ ಅವಮಾನವಾಗಿದೆ.

ನನ್ನ ಮುಂದೆ ಎರಡು ದಾರಿಯಿತ್ತು.ಒಂದು ಮೋದಿಯ ಬಳಿಗೆ ಹೋಗುವುದು ಇನ್ನೊಂದು ಜನರ ಬಳಿ ತೆರಳುವುದು. ನಾನು ಜನರ ಬಳಿ ಹೋಗುವ ದಾರಿಯನ್ನೇ ಆಯ್ದುಕೊಂಡಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News