ನಾನು ಎದುರಿಸಿದ ಶ್ರೇಷ್ಠ ಬೌಲರ್ ಮೆಕ್‌ಗ್ರಾತ್: ದ್ರಾವಿಡ್

Update: 2016-12-02 17:20 GMT

ಮುಂಬೈ, ಡಿ.2: ಆಸ್ಟ್ರೇಲಿಯದ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ವೃತ್ತಿಜೀವನದಲ್ಲಿ ತಾನು ಎದುರಿಸಿದ ಶ್ರೇಷ್ಠ ಬೌಲರ್ ಆಗಿದ್ದಾರೆ ಎಂದು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

‘‘ನಾನು ಆಡುತ್ತಿದ್ದ ಕಾಲದಲ್ಲಿ ಆಸ್ಟ್ರೇಲಿಯ ಶ್ರೇಷ್ಠ ಕ್ರಿಕೆಟ್ ತಂಡವಾಗಿತ್ತು. ನಾನು ಎಲ್ಲ ಶ್ರೇಷ್ಠ ಬೌಲರ್‌ಗಳ ವಿರುದ್ಧವೂ ಆಡಿದ್ದೆ. ಅವರಲ್ಲಿ ಶ್ರೇಷ್ಠ ವೇಗದ ಬೌಲರ್‌ಗಳೂ ಇದ್ದರು. ನಾನು ಎದುರಿಸಿದ ಶ್ರೇಷ್ಠ ಬೌಲರ್‌ಗಳಲ್ಲಿ ಮೆಕ್‌ಗ್ರಾತ್ ಮೊದಲ ಸ್ಥಾನದಲ್ಲಿದ್ದಾರೆ’’ ಎಂದು ದ್ರಾವಿಡ್ ನುಡಿದರು.

‘‘ಅವರು(ಮೆಕ್‌ಗ್ರಾತ್) ಚಾಣಾಕ್ಷ ಬೌಲರ್ ಆಗಿದ್ದರು. ನನಗೆ ಅವರು ಹೆಚ್ಚು ಸವಾಲಾಗಿ ಕಾಡಿದ್ದರು. ಅವರು ಬೆಳಗ್ಗಿನ ಅವಧಿಯಲ್ಲಿ ಅಥವಾ ಸಂಜೆ ವೇಳೆಗೆ ಬೌಲಿಂಗ್‌ಮಾಡಿದ್ದರೂ ಅವರ ನಿಖರತೆಯಲ್ಲಿ ಬದಲಾವಣೆ ಇರುತ್ತಿರಲಿಲ್ಲ. ಅವರ ಬೌಲಿಂಗ್‌ನಲ್ಲಿ ಉತ್ತಮ ವೇಗ, ಬೌನ್ಸ್ ಇರುತ್ತಿತ್ತು’’ ಎಂದು ಆಸ್ಟ್ರೇಲಿಯದ ವಿರುದ್ಧ ಗರಿಷ್ಠ ಸ್ಕೋರ್ ದಾಖಲಿಸಿರುವ ದ್ರಾವಿಡ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News