ರೈತನಿಂದ 37 ಬ್ಯಾಂಕ್ ಪಾಸ್‌ಬುಕ್, 44 ಎಟಿಎಂ ಕಾರ್ಡ್ ಪೊಲೀಸರ ವಶ

Update: 2016-12-04 14:58 GMT

ಗುವಾಹಟಿ,ಡಿ.4: ಅಸ್ಸಾಮಿನ ಮಜುಲಿ ಜಿಲ್ಲೆಯಲ್ಲಿ ರೈತನೋರ್ವನ ಬಳಿಯಿಂದ ಬ್ಯಾಂಕ್ ಮತ್ತು ಅಂಚೆಕಚೇರಿಗಳ 37 ಪಾಸ್‌ಬುಕ್‌ಗಳು, 44 ಎಟಿಎಂ ಕಾರ್ಡ್‌ಗಳು, 34 ಚೆಕ್‌ಪುಸ್ತಕಗಳು, 200ಕ್ಕೂ ಅಧಿಕ ಖಾಲಿಚೆಕ್‌ಗಳು, 22,380 ರೂ.ನಗದು, ಒಂದು ಲ್ಯಾಪ್‌ಟಾಪ್ ಮತ್ತು ಖಾಲಿ ಸ್ಟಾಂಪ್ ಪೇಪರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾಧುಪುರ ಗ್ರಾಮದ ರೈತ ಜಿಂಟು ಬೋರಾನ ನಿವಾಸದ ಮೇಲೆ ಶನಿವಾರ ಸಂಜೆ ಪೊಲೀಸರು ದಾಳಿ ನಡೆಸಿದ್ದರು.

 ತಾನು ಗ್ರಾಮಸ್ಥರಿಗೆ ನೀಡಿರುವ ಸಾಲಗಳಿಗೆ ಭದ್ರತೆಯಾಗಿ ಪಾಸ್‌ಬುಕ್,ಎಟಿಎಂ ಕಾರ್ಡ್ ಮತ್ತು ಇತರ ದಾಖಲೆಗಳನ್ನು ತನ್ನ ಬಳಿ ಇಟ್ಟುಕೊಂಡಿರುವುದಾಗಿ ಬೋರಾ ಹೇಳಿಕೊಂಡಿದ್ದಾನೆ. ಆದರೆ ಈ ಖಾತೆಗಳ ಮೂಲಕ ಕಪ್ಪುಹಣವನ್ನು ಬ್ಯಾಂಕುಗಳಿಗೆ ಜಮಾ ಮಾಡಿರುವ ಸಾಧ್ಯತೆಗಳನ್ನು ನಾವು ಸಂಪೂರ್ಣವಾಗಿ ತಳ್ಳಿಹಾಕುತ್ತಿಲ್ಲ ಎಂದು ಎಸ್‌ಪಿ ಚಂದ್ರಕಾಂತ ನಿಂಬಾಳ್ಕರ್ ಸುದ್ದಿಗಾರರಿಗೆ ತಿಳಿಸಿದರು.

ಬೋರಾ ಬಳಿ ರದ್ದಾಗಿರುವ ಹಳೆಯ ನೋಟುಗಳು ಪತ್ತೆಯಾಗಿಲ್ಲ,ಹೀಗಾಗಿ ಆತ ಲಘುಶಿಕ್ಷೆಯೊಂದಿಗೆ ಪಾರಾಗಬಹುದು ಎಂದು ಹೇಳಿದ ತನಿಖಾಧಿಕಾರಿ, ಆತನ ವಶದಲ್ಲಿರುವ ಖಾತೆಗಳಲ್ಲಿ ಯಾರು ಎಷ್ಟು ಹಣ ಜಮೆ ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ವಿಚಾರಣೆಗೊಳಪಡಿಸಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News