ಜನಧನ ಖಾತೆಯಲ್ಲಿ ಅಘೋಷಿತ 1.64 ಕೋಟಿ ರೂ. ಪತ್ತೆ

Update: 2016-12-04 15:23 GMT

ಹೊಸದಿಲ್ಲಿ, ಡಿ.4: ಜನಧನ ಖಾತೆಯಲ್ಲಿ ಇಡಲಾದ ಠೇವಣಿಗಳಲ್ಲಿ ಹಲವಾರು ಅಸಮಂಜತೆಯನ್ನು ಮನಗಂಡಿರುವ ಆದಾಯತೆರಿಗೆ ಇಲಾಖೆ, ಸುಮಾರು 1.64 ಕೋಟಿ ರೂ.ಗಳಷ್ಟು ಅಘೋಷಿತ ಹಣವ ್ನು ಈ ಖಾತೆಗಳಲ್ಲಿ ಪತ್ತೆ ಹಚ್ಚಿದೆ.

   ಇದುವರೆಗೆ ಆದಾಯತೆರಿಗೆ ವಿವರ ಸಲ್ಲಿಸದ, ತೆರಿಗೆ ಪಾವತಿ ಮಿತಿಗಿಂತ ಕಡಿಮೆ ಆದಾಯ ಇರುವ ವ್ಯಕ್ತಿಗಳ ಜನಧನ ಖಾತೆಯಲ್ಲಿ ಏಕಾಏಕಿ ಹಣದ ಠೇವಣಿ ಹೆಚ್ಚಳವಾಗಿರುವುದು ಗಮನಕ್ಕೆ ಬಂದಿದೆ. ಕೋಲ್ಕತಾ, ಮಿಡ್ನಾಪುರ, ಬಿಹಾರ, ಕೊಚ್ಚಿ ಮತ್ತು ವಾರಾಣಸಿಯಲ್ಲಿ ಜನಧನ ಖಾತೆಗಳಲ್ಲಿ ಈ ವ್ಯತ್ಯಾಸ ಪತ್ತೆಹಚ್ಚಲಾಗಿದೆ. ಬಿಹಾರದಲ್ಲಿ ಒಬ್ಬ ವ್ಯಕ್ತಿಯ ಜನಧನ ಖಾತೆಯಲ್ಲಿ 40 ಲಕ್ಷ ಹಣ ಠೇವಣಿ ಇಡಲಾಗಿದೆ ಎಂದು ವಿತ್ತ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ 1961ರ ಅಡಿ ಈ ಅಘೋಷಿತ ಹಣದ ಮೇಲೆ ತೆರಿಗೆ ವಿಧಿಸಲಾಗುವುದು . ಜೊತೆಗೆ , ಇನ್ನಿತರ ಕಾನೂನು ಕ್ರಮ ಕೈಗೊಳ್ಳುವುದನ್ನು ತನಿಖೆಯ ಬಳಿಕ ನಿರ್ಧರಿಸಲಾಗುವುದು . ಆದ್ದರಿಂದ ತಮ್ಮ ಜನಧನ ಖಾತೆಯಲ್ಲಿ ಬೇರೆಯವರ ಅಘೋಷಿತ ಹಣವನ್ನು ಠೇವಣಿ ಇಡಲು ಅವಕಾಶ ಮಾಡಿಕೊಡಬೇಡಿ ಎಂದು ತಿಳಿಸಲಾಗಿದೆ.

ನ.8ರಂದು ನೋಟು ಅಮಾನ್ಯ ನಿರ್ಧಾರ ಪ್ರಕಟಗೊಂಡ ಬಳಿಕ ನ.30ರವರೆಗಿನ ಅವಧಿಯಲ್ಲಿ 25.85 ಕೋಟಿ ಜನಧನ ಖಾತೆಗಳಲ್ಲಿ 74,321.55 ಕೋಟಿ ರೂ. ಹಣ ಠೇವಣಿ ಇಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News