×
Ad

ಈ ಸಾವಿಗೆ ಯಾರು ಹೊಣೆ..?

Update: 2016-12-09 23:28 IST

ಮಾನ್ಯರೆ,

500, 1,000 ರೂ. ಮುಖಬೆಲೆಯ ನೋಟು ಚಲಾವಣೆ ರದ್ದು ಮಾಡಿದ್ದರ ಪರಿಣಾಮವಾಗಿ ಜನಸಾಮಾನ್ಯರ ಹಲವು ಜೀವಗಳು ಬಲಿಯಾಗಿವೆ.

ಹಳೆ ನೋಟು ಬದಲಾವಣೆಗಾಗಿ ಸತತ 3 ದಿನಗಳ ಕಾಲ ಬ್ಯಾಂಕ್ ಮುಂದೆ ನಿಂತರೂ ಹಣ ಬದಲಾವಣೆ ಮಾಡಿಸಿಕೊಳ್ಳುವಲ್ಲಿ ವಿಫಲರಾದ ಮಹಿಳೆ ಯೊಬ್ಬರು ತೀವ್ರವಾಗಿ ಮನನೊಂದು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಮೊನ್ನೆಯಷ್ಟೇ ಉತ್ತರ ಪ್ರದೇಶದ ಅಲಿಗಡದಲ್ಲಿ ನಡೆದಿದೆ.

ಇದರ ಬೆನ್ನಲ್ಲೇ ವೃದ್ಧಾಪ್ಯ ವೇತನ ಪಡೆಯಲು ಬ್ಯಾಂಕ್‌ನಲ್ಲಿ ಕ್ಯೂ ನಿಂತಿದ್ದ ವೃದ್ಧರೊಬ್ಬರು ಮಣಿಪುರದ ಇಂಫಾಲದಲ್ಲಿ ಸಾವನ್ನಪ್ಪಿದರು. ಹೀಗೆ ಸಾವಿನ ಸರಣಿ ಏರುತ್ತಲೇ ಇದೆ.

ಇಂದು ಜೀವನ ನಿರ್ವಹಣೆಗೆ ಹಣ ಅನಿವಾರ್ಯವಾಗಿ ಬೇಕು. ತಮ್ಮ ಕೆಲಸ ಬಿಟ್ಟು ದಿನವಿಡೀ ಕಾದು ನಿಂತರೂ ಹಣ ಸಿಗದಿದ್ದರೆ ಜನಸಾಮಾನ್ಯರೇನು ಮಾಡಬೇಕು? ನೋಟು ಅಮಾನ್ಯದಿಂದಾಗಿ ಪ್ರಾಣಕಳೆದುಕೊಂಡವರನ್ನು ಮರಳಿ ಬದುಕಿಸಲಾಗುತ್ತದೆಯೇ? ಅವರನ್ನು ನಂಬಿದವರಿಗೆ ಮುಂದೆ ಯಾರು ಆಸರೆಯಾಗುತ್ತಾರೆ..?

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News