×
Ad

ರಾಷ್ಟ್ರಗೀತೆಯನ್ನು ಅವಮಾನಿಸಲು ಆರೆಸ್ಸೆಸ್ ನಿಂದ ಯತ್ನ: ಎಂ.ಎ. ಬೇಬಿ

Update: 2016-12-18 11:41 IST

ತಿರುವನಂತಪುರಂ,ಡಿಸೆಂಬರ್ 18: ರಾಷ್ಟ್ರಗೀತೆಯನ್ನು ವಿವಾದದ ವಿಷಯವನ್ನಾಗಿಸಿ ಅಪಮಾನಿಸಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆ ಹಾಗೂ ದೇಶದ ಚಿಹ್ನೆಗಳ ಮೂಲಕ ಜನರನ್ನು ವಿಭಜಿಸುತ್ತಿದೆ ಎಂದು ಸಿಪಿಎಂ ಕೇರಳದ ಪೊಲಿಟ್‌ಬ್ಯೂರೊ ಸದಸ್ಯ ಎಂ.ಎ. ಬೇಬಿ ಹೇಳಿದ್ದಾರೆಂದು ವರದಿಯಾಗಿದೆ. ರಾಷ್ಟ್ರಗೀತೆಯನ್ನು ಎಲ್ಲರೂ ಗೌರವಿಸುತ್ತಾರೆ. ಆದರೆ, ಅದನ್ನು ಕಡ್ಡಾಯವಾಗಿ ಹಾಡಬೇಕೆಂಬ ನಿಯಮವೇನಿಲ್ಲ. ಆ ರೀತಿಯ ಹೇರಿಕೆಯನ್ನು  ನಮ್ಮ ಸಂವಿಧಾನ ಪರಿಗಣಿಸಿಲ್ಲ. ರಾಷ್ಟ್ರಗೀತೆ ಎಲ್ಲಿ ಕಡ್ಡಾಯ ಮತ್ತು ಅದು ಹಾಡುವಾಗ ಎಲ್ಲರೂ ಎದ್ದು ನಿಲ್ಲಬೇಕೇ ಎಂಬ ಕುರಿತು ಸಂವಿಧಾನದಲ್ಲಿ ನಿಯಮಗಳಿಲ್ಲ ಎಂದು ಅವರು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸಿನೆಮಾ ಗೃಹಗಳಲ್ಲಿ ಪ್ರತೀ ಪ್ರದರ್ಶನಕ್ಕಿಂತ ಮುಂಚೆ ರಾಷ್ಟ್ರಗೀತೆ ಬಿತ್ತರಿಸಬೇಕು. ಸಿನೆಮಾ ನೋಡಲು ಬರುವ ಎಲ್ಲರೂ ಎದ್ದು ನಿಲ್ಲಬೇಕೆನ್ನುವ ಸುಪ್ರೀಂಕೋರ್ಟಿನ ಆದೇಶ ದೇಶದ ಕಾನೂನು ವ್ಯವಸ್ಥೆಯ ಗೌರವಕ್ಕೆ ಚ್ಯುತಿಯಾಗಿದೆ. ಚಲನಚಿತ್ರೋತ್ಸವದಂತಹ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ, ಅಥವಾ ಸಿನೆಮಾದ ಪ್ರಥಮ ಪ್ರದರ್ಶನದ ವೇಳೆ ರಾಷ್ಟ್ರಗೀತೆ ಬಿತ್ತರಿಸಿದರೆ ಸಾಲದು, ಸಿನೆಮಾದ ಎಲ್ಲ ಪ್ರದರ್ಶನಗಳ ಆರಂಭದಲ್ಲಿ ರಾಷ್ಟ್ರಗೀತೆ ಇರಲೇ ಬೇಕು. ಮತ್ತು ಅದು ಬಿತ್ತರವಾಗುವಾಗ ಎಲ್ಲರೂ ಎದ್ದು ನಿಲ್ಲಬೇಕೆಂಬ ಸುಪ್ರೀಂಕೋರ್ಟಿನ ಆದೇಶ ರಾಷ್ಟ್ರಗೀತೆಯನ್ನು ಬಾಲಿಶಗೊಳಿಸದಂತಲ್ಲವೇ ಎಂಬ ಚರ್ಚೆಗೆ ಇದು ಅವಕಾಶ ಮಾಡಿ ಕೊಟ್ಟಿದೆ. ಆದ್ದರಿಂದ ತಾನು ಪರಮೋನ್ನತ ಕೋರ್ಟು ತನ್ನ ತೀರ್ಪನ್ನು ತಿದ್ದಿಕೊಳ್ಳಲಿದೆ ಎಂದು ಭಾವಿಸುತ್ತೇನೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಮುಂತಾದ ರಾಷ್ಟ್ರೀಯ ಚಿಹ್ನೆಗಳು ಹಾಗೂ ಪ್ರಜಾಪ್ರಭುತ್ವ, ಜಾತ್ಯತೀತತೆ ಮುಂತಾದ ದೇಶದ ಮೌಲ್ಯಗಳ ಬಗ್ಗೆ ಆರೆಸ್ಸೆಸ್ ಯಾವತ್ತೂ ಆದರದಿಂದ ವರ್ತಿಸಿದ್ದಿಲ್ಲ. ಆದರೂ, ಕೇರಳ ಚಲನಚಿತ್ರೋತ್ಸವದ ವೇಳೆ ನಡೆದ ಘಟನೆಗಳಿಗಾಗಿ ಮಲೆಯಾಳಂ ಚಿತ್ರ ನಿರ್ದೇಶಕ ಕಮಲ್‌ರ ವಿರುದ್ಧ ಆರೆಸ್ಸೆಸ್ ಕೋಮುವಾದಿ ಪ್ರಚಾರವನ್ನು ನಡೆಸುತ್ತಿದೆ. ಇದು ಅದರ ಬಣ್ಣವನ್ನು ಬಯಲುಗೊಳಿಸುತ್ತಿದೆ ಎಂದು ಎಂ.ಎ. ಬೇಬಿ ತನ್ನ ಫೇಸ್‌ಬುಕ್ ಬರಹದಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News