50ಲಕ್ಷ ರೂ. ಹೊಸ ನೋಟುಗಳೊಂದಿಗೆ ಇಬ್ಬರ ಬಂಧನ
Update: 2016-12-25 12:49 IST
ಕಣ್ಣೂರ್,ಡಿ.25: ಇಲ್ಲಿಗೆ ಸಮೀಪದ ಕೂತ್ತುಪರಂಬ್ ಎಂಬಲ್ಲಿ 50ಲಕ್ಷ ರೂಪಾಯಿ ಹೊಂದಿದ್ದ ಮಹಾರಾಷ್ಟ್ರದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಅಬಕಾರಿ ಆಯುಕ್ತರ ಸೂಚನೆಯ ಮೇರೆಗೆ ವಾಹನ ತಪಾಸಣೆ ವೇಳೆ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಬಂದಿದ್ದ ಮಹಾರಾಷ್ಟ್ರದ ರಂಜಿತ್,ರಾಹುಲ್ ಎಂಬವರು ಅಕ್ರಮವಾಗಿ ಸಾಗಿಸುತ್ತಿದ್ದ 50ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. 2ಸಾವಿರ ರೂಪಾಯಿ ಹೊಸನೋಟುಗಳು ಹಾಗೂ ನೂರು ರೂಪಾಯಿಯ ಹಳೆ ನೋಟುಗಳು ಅವರ ಬಳಿಯಿದ್ದವು.
ಅಬಕಾರಿ ಪೊಲೀಸರು ಕಪ್ಪು ಹಣವೆಂದು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನಿಂದ ಕಣ್ಣೂರಿಗೆ ಹಣ ಸಾಗಿಸಲಾಗುತ್ತಿತ್ತು ಎಂದು ವರದಿತಿಳಿಸಿದೆ.