ವಾಜಪೇಯಿಗೆ ಮಂದಿರ: ಅಲ್ಲಿ ದಿನಾಲೂ ಪೂಜೆ
ಗ್ವಾಲಿಯರ್ ಡಿ. 25: ಬಿಜೆಪಿಯ ಜನಪ್ರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ದೇಶಾದ್ಯಂತ ಆಚರಿಸಲಾಗುತ್ತಿದ್ದು, ಮಧ್ಯಪ್ರದೇಶದ ಗ್ವಾಲಿಯರ್ ಅವರ ಮಂದಿರವಿದೆ. ಅಲ್ಲಿ ದಿನಾಲೂ ಭಜನೆ,ಆರತಿ ಎತ್ತಲಾಗುತ್ತಿದೆ. ಗ್ವಾಲಿಯರ್ ವಾಜಪೇಯಿ ಅವರ ಕರ್ಮಸ್ಥಳವಾಗಿದ್ದು, ಅಲ್ಲಿ ಪತ್ರಿಕೋದ್ಯಮ, ರಾಜಕೀಯದ ಬಾಲಪಾಠಗಳನ್ನು ಅವರು ಕಲಿತಿದ್ದಾರೆ. ವಾಜಪೇಯಿಯ ಅಭಿಮಾನಿ ವಿಜಯ್ ಸಿಂಗ್ ಚೌಹಾಣ್ ಗ್ವಾಲಿಯರ್‌ನ ಸತ್ಯನಾರಾಯಣ ಟೇಕರಿ ಹಿಂದಿಮಾತಾ ಮಂದಿರದ ಸಮೀಪ ವಾಜಪೇಯಿಗೆ ಮಂದಿರ ಕಟ್ಟಿಸಿದ್ದಾರೆ. ಮಂದಿರದಲ್ಲಿ ವಾಜಪೇಯಿ ಮೂರ್ತಿ ಬದಲಿಗೆ ಅವರ ಒಂದು ಫೋಟೊ ಇದೆ. "ಅಟಲ್ ದೇವರಲ್ಲ ಹಿಂದಿ ಸಂತ" ಎಂದು ವಿಜಯ್ ಸಿಂಗ್ ಚೌಹಾಣ್ ಹೇಳುತ್ತಾರೆ.
ವಾಜಪೇಯಿ ಪ್ರತಿಮೆ ತಯಾರಿಕಾ ಹಂತದಲ್ಲಿದ್ದು ಅದನ್ನು ಮಂದಿರದಲ್ಲಿರಿಸಲಾಗುವುದು ಎನ್ನುತ್ತಾರೆ ಸಿಂಗ್. ಅಟಲ್ ಬಿಹಾರಿ ವಾಜಪೇಯಿಗೆ ಮುಂದಿನ ಪೀಳಿಗೆ ಅವರನ್ನು ಅರಿಯಲಿಕ್ಕಾಗಿ ತಾನು ಮಂದಿರ ಕಟ್ಟಿಸಿದ್ದೇನೆ ಎನ್ನುತ್ತಾರೆ ಅವರು. ವಾಜಪೇಯಿ ಹಿಂದಿಯಲ್ಲಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದರು. ಅವರ ಹಿಂದಿ ಪ್ರೇಮವನ್ನು ಪರಿಗಣಿಸಿ ಹಿಂದಿಮಾತಾ ಮಂದಿರ ಬಳಿ ಅವರ ಮಂದಿರ ಕಟ್ಟಿಸಲಾಯಿತು. ಈ ಮಂದಿರದಲ್ಲಿ ನಿಯಮಿತವಾಗಿ ಆರತಿ ಪೂಜೆ ನಡೆಯುತ್ತಿದ್ದು, ಜನರು ಅಟಲ್ ಬಿಹಾರಿ ವ್ಯಕ್ತಿತ್ವವನ್ನು ನೆನೆಸಿಕೊಳ್ಳುತ್ತಾರೆ. ಅಟಲ್‌ಜಿಯ 91ನೆ ಜನ್ಮದಿನದ ಸಂದರ್ಭದಲ್ಲಿ ಅಲ್ಲಿ ವಿಶೇಷ ಪೂಜೆ ಅರ್ಚನೆಗಳಾಗಿದ್ದು , ಜನರಿಗೆ ಸಿಹಿ ಹಂಚಲಾಗಿದೆ. ಅವರ ದೀರ್ಘಾರೋಗ್ಯವನ್ನು ಹಾರೈಸಲಾಗಿದೆ ಎಂದು ವರದಿ ತಿಳಿಸಿದೆ.